ಬ್ರಿಟನ್ ರಾಣಿ ನಿಧನ: ಭಾರತದಲ್ಲಿ ಒಂದು ದಿನ ಶೋಕಾಚರಣೆ

157

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬ್ರಿಟನ್ ದೇಶವನ್ನು ಸುದೀರ್ಘವಾಗಿ ಆಳಿದ 2ನೇ ಎಲಜಿಬೆತ್(96) ನಿಧನದ ಹಿನ್ನೆಲೆಯಲ್ಲಿ ಭಾರತದಲ್ಲಿ ಒಂದು ದಿನ ಶೋಕಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಸೆಪ್ಟೆಂಬರ್ 11ರಂದು ರಾಜ್ಯಗಳಲ್ಲಿ ಶೋಕಾಚರಣೆ ನಡೆಸಲು ಸೂಚಿಸಲಾಗಿದ್ದು, ಅಂದು ಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತಿದೆ. ಈ ಮೂಲಕ ನಿಧನ ಹೊಂದಿದ್ದ ಬ್ರಿಟನ್ ರಾಣಿ ಎಲಿಜಿಬೆತ್ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.

2ನೇ ಎಲಿಜಿಬೆತ್ ಭಾರತಕ್ಕೆ ಮೂರು ಬಾರಿ ಭೇಟಿ ನೀಡಿದ್ದರು. ಒಮ್ಮೆ ಕಮಲ್ ಹಾಸನ್ ನಟನೆಯ ‘ಮರುದನಯಾಗಂ’ ಚಿತ್ರದ ಶೂಟಿಂಗ್ ಸೆಟ್ ಗೆ 1997ರಲ್ಲಿ ಭೇಟಿ ನೀಡಿ 20 ನಿಮಿಷ ಮಾತುಕತೆ ನಡೆಸಿದ್ದರು. ಆ ಕಾಲದಲ್ಲೇ ಅದು ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಬಿಗ್ ಬಜೆಟ್ ಸಿನಿಮಾ. ಮುಂದೆ ಇದೆ ಬಜೆಟ್ ಕಾರಣಕ್ಕೆ ಸಿನಿಮಾ ಅರ್ಧಕ್ಕೆ ನಿಂತು ಹೋಗಿ ನಟ ಕಮಲ್ ಹಾಸನ್ ಸಾಲದ ಸುಳಿಗೆ ಸಿಲುಕುವಂತಾಯಿತು.




Leave a Reply

Your email address will not be published. Required fields are marked *

error: Content is protected !!