ಕ್ಯಾಂಪಸ್ ನೆನಪೆ ಹಸಿರು…

809

ಬಾಲ್ಯದಿಂದ ಪ್ರೌಢಾವಸ್ಥೆಯವರೆಗೂ ಶಾಲಾ, ಕಾಲೇಜು ಎಂಬ ವಾತಾವರಣದಲ್ಲಿ ಕಳೆದು ಹೋಗುವ ಪ್ರತಿಯೊಬ್ಬರಲ್ಲಿ ಅವರದೆಯಾದ ಅನುಭವ, ಸಂಬಂಧ, ಸ್ನೇಹ, ಪ್ರೀತಿ ಸೃಷ್ಟಿಯಾಗುತ್ತದೆ. ಆ ಕ್ಯಾಂಪಸ್ ನಲ್ಲಿ ಕಳೆಯುವ ಪ್ರತಿ ಸನ್ನಿವೇಶವು ತನ್ನದೆಯಾದ ಛಾಪನ್ನು ಮನದಲ್ಲಿ ಹಸಿರಾಗಿರಿಸುತ್ತದೆ.

ಹೀಗೆಯೇ ನನ್ನ ಜೀವನದ ಹಲವಾರು ಹಂತಗಳಲ್ಲಿಯೂ ಆ ಬಯಲಿನ ಸ್ನೇಹ, ಸಂಬಂಧ, ಬಾಂಧವ್ಯವನ್ನು ಅನುಭವಿಸುತ್ತಾ ಬಂದಿದ್ದೇನೆ. ನಾನು ಮನೆ ಅಂಗಳದಲ್ಲಿ ಸಮಯ ಕಳೆದಿದ್ದಕ್ಕಿಂತಲೂ ಕಾಲೇಜು ಕ್ಯಾಂಪಸ್, ಕೊಠಡಿಯಲ್ಲಿ ಓದು, ಬರಹ, ಮೋಜು ಮಸ್ತಿಯೊಂದಿಗೆ ಕಳೆದಿದ್ದು ಹೆಚ್ಚು.

ಬಾಳಿನ ಕೊನೆವರೆಗೂ ನೆನಪಿರುವ ಕ್ಯಾಂಪಸ್ ನಲ್ಲಿ ಕಳೆದ ಕಾಲ, ತರಗತಿಯ ಅಂಕಗಳು ಮರೆತು ಹೋಗಿದ್ದರು, ಬಯಲಿನ ಆಟ, ಕೋಪ, ಮೋಜು, ನಗೆಹನಿಗಳು ಅಚ್ಚಳಿಯದೆ ಉಳಿದಿವೆ.

ಪ್ರೀತಿ ಬಂಡಿವಾಡ, ವಿದ್ಯಾರ್ಥಿನಿ, ಲಿಂಗದಾಳ


TAG


Leave a Reply

Your email address will not be published. Required fields are marked *

error: Content is protected !!