ಸಿಂದಗಿ: ಸಿಂದಗಿ ಪಟ್ಟಣದ ವಾರ್ಡ್ ನಂಬರ್ 7ರ ಹೆಗ್ಗೇರಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ, ತೋಟಗಾರಿಕೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ ಮನಗೂಳಿ ಅವರು ಚಾಲನೆ ನೀಡಿದ್ರು.

ಅಂದಾಜು 30 ಲಕ್ಷ ರೂಪಾಯಿ ವೆಚ್ಚದ 150 ಮೀಟರ್ ಉದ್ದದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಸಚಿವರು ಚಾಲನೆ ನೀಡಿದ್ರು. ಈ ವೇಳೆ ಸ್ಥಳೀಯರ ಸಮಸ್ಯೆಗಳನ್ನ ಆಲಿಸಿದ ಸಚಿವ ಎಂ.ಸಿ ಮನಗೂಳಿ ಅವರು, ಅವರ ಕುಂದು ಕೊರತೆಗಳನ್ನ ಆದಷ್ಟು ಬೇಗ ಪರಿಹಾರ ಮಾಡಲಾಗುವುದು ಅಂತಾ ತಿಳಿಸಿದ್ರು.

2018-19ನೇ ಸಾಲಿನ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ 2 ಕೋಟಿ ರೂಪಾಯಿ ಮಂಜೂರಾಗಿದ್ದು, ಸಿಂದಗಿ ನಗರ ಸೇರಿದಂತೆ ತಾಲೂಕಿನ 9 ಹಳ್ಳಿಗಳ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಯಲಿದೆ. ಸಿಂದಗಿ ನಗರ, ಯರಗಲ್ಲ ಬಿಕೆ. ಬ್ಯಾಕೋಡ, ಚಟ್ಟರಕಿ, ಕಡಣಿ, ಮಡ್ನಳ್ಳಿ, ಗಣಿಹಾರ, ಸೋಮಜಾಳ, ಯಥನಾಳ ಹಾಗೂ ಹೊನ್ನಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಯನ್ನ ಕೈಗೆತ್ತಿಕೊಳ್ಳಲಾಗ್ತಿದೆ. ಈ ಮೂಲಕ ಉತ್ತಮ ರಸ್ತೆ, ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡುವ ಕಾರ್ಯವನ್ನ ಕೆಆರ್ ಐಡಿಎಲ್ ವಹಿಸಿಕೊಂಡಿದೆ.