ವಿವಿಧ ವೇಷ ಭೂಷಣದಲ್ಲಿ ಮಿಂಚಿದ ಕ್ರಿಯೇಟಿವ್ ಕಿಡ್ಸ್ ಶಾಲೆ ಮಕ್ಕಳು

582

ಸಿಂದಗಿ: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನದ ಪ್ರಯುಕ್ತ ಪಟ್ಟಣದ ವಿದ್ಯಾಚೇತನ ಕ್ರಿಯೇಟಿವ್ ಕಿಡ್ಸ್ ಹೋಮ್ ನಲ್ಲಿ, ಗುರುವಾರ ಮಕ್ಕಳ ದಿನಾಚರಣೆ ಆಚರಿಸಲಾಯ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಬಿ.ಎನ್.ಪಾಟೀಲ, ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಹೆಚ್ಚು ಕಾಣುತ್ತಿದೆ. ಆದ್ದರಿಂದ ನಾಳಿನ ಪ್ರಜೆಗಳಾದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅತ್ಯವಶ್ಯಕ ಎಂದರು.

ಮುಖ್ಯಗುರುಮಾತೆ ಜ್ಯೋತಿ ರಮೇಶ ಪೂಜಾರ ಮಾತನಾಡಿ, ಮಕ್ಕಳಿಗೆ ಅವರದೆಯಾದ ಹಕ್ಕುಗಳಿವೆ. ಅವುಗಳನ್ನು ಮಕ್ಕಳು ಅನುಭವಿಸಲು ನಾವು ಮಾರ್ಗದರ್ಶನ ನೀಡುವುದು ಅತ್ಯವಶ್ಯಕ ಎಂದರು.

ಪರಿಸರ ಜಾಗೃತಿ, ನೀರಿನ ಮಿತ ಬಳಕೆ, ವಿವಿಧ ರಾಜ್ಯಗಳ ವೈವಿಧ್ಯತೆ, ಧಾರ್ಮಿಕ ಮಹಾಪುರುಷರ ವೇಷ ಭೂಷಣ, ವಿವಿಧ ವೃತ್ತಿಗಳ ಮೇಲೆ ಬೆಳಕು ಚೆಲ್ಲುವ ಡ್ರೆಸ್ ಕೋಡ್, ಸ್ವತಂತ್ರ ಹೋರಾಟಗಾರರ, ಕ್ರೀಡಾಪಟುಗಳ ಅವತಾರದಲ್ಲಿ ಪುಟ್ಟ ಪುಟ್ಟ ಮಕ್ಕಳು ಕಾಣಿಸಿಕೊಂಡು ಹೆತ್ತವರ ಮುಂದೆ ತೊದಲು ನುಡಿಗಳನ್ನ ಆಡಿದ್ರು.

ಶಿಕ್ಷಕಿಯರಾದ ಅಶ್ವಿನಿ ಲೋಣಿ, ಸಾಧನಾ ಇಮಡೆ, ಮಂಗಳಾ ಬಮ್ಮಣ್ಣಿ, ವಿಜಯಲಕ್ಷ್ಮಿ ಮಠಪತಿ, ಗೌರಿ ಪಾಟೀಲ, ಗಂಗಾ ಪಾಟೀಲ, ನಂದಿಕೋಲ, ಶರಣು ಗೋರ್ಜಿ, ರೇಣುಕಾ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಓದುಗರ ಗಮನಕ್ಕೆ




Leave a Reply

Your email address will not be published. Required fields are marked *

error: Content is protected !!