ಖ್ಯಾತ ಕೋರಿಯೋಗ್ರಾಫರ್ ರೆಮೋಗೆ ಹಾರ್ಟ್ ಅಟ್ಯಾಕ್

260

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಸಿನಿ ರಂಗದ ಖ್ಯಾತ ಕೋರಿಯೋಗ್ರಾಫರ್ ರೆಮೋ ಡಿಸೋಜಾ ಅವರಿಗೆ ಹೃದಯಾಘಾತವಾಗಿದೆ. ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲಾಸ್ಟಿ ಚಿಕಿತ್ಸ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗ್ತಿದೆ.

ಶುಕ್ರವಾರ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಇದೀಗ ಅವರನ್ನ ಐಸಿಯುಗೆ ದಾಖಲಿಸಲಾಗಿದೆ. ಸಧ್ಯಕ್ಕೆ ಯಾವುದೇ ಅಪಾಯವಿಲ್ಲವೆಂದು ತಿಳಿದು ಬಂದಿದ್ದು, ಅವರ ಅಭಿಮಾನಿಗಳಿಗೆ ಒಂದಿಷ್ಟು ಸಮಾಧಾನವಾಗಿದೆ.




Leave a Reply

Your email address will not be published. Required fields are marked *

error: Content is protected !!