ಕವಿವಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

242

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ ಮತ್ತು ವಿವಿಧ ವಿಭಾಗಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಲಪತಿ ಪ್ರೊ.ಕೆ.ಬಿ ಗುಡಸಿ, ಇದು ನನ್ನ ಕ್ಯಾಂಪಸ್, ನನ್ನ ವಿಭಾಗ ಎಂಬ ಮನೋಭಾವ ‌ಬೆಳಸಿಕೊಳ್ಳಬೇಕು. ನಿಮ್ಮ ವಿಭಾಗಗಳ ಸುತ್ತಮುತ್ತ ಸ್ವಚ್ಛಗೊಳಿಸುವ ಮೂಲಕ ವಿಶ್ವವಿದ್ಯಾಲಯದ ಕ್ಯಾಂಪಸನಲ್ಲಿ ನಿರ್ಮಲ ವಾತಾವರಣ ನಿರ್ಮಿಸಲು ಮನಸ್ಸು ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸ್ವಚ್ಚತಾ ಅಭಿಯಾನದಲ್ಲಿ ಭೌತಶಾಸ್ತ್ರ, ಜೈವಿಕ ಅಧ್ಯಯನ ವಿಭಾಗ, ಪ್ರಾಣಿಶಾಸ್ತ್ರ, ಜೀವರಸಾಯನಶಾಸ್ತ್ರ, ವಾಣಿಜ್ಯ ವಿಭಾಗ, ಭೂ-ವಿಜ್ಞಾನ ವಿಭಾಗಗಳ‌ ಮುಂದೆ ಇರುವ ಹಸಿ ಕಸ‌ ,ಒಣ ಕಸ ಮತ್ತು ಕಳೆಯನ್ನು ಸ್ವಚ್ಚಗೊಳಿಸಿ, ಟ್ರ್ಯಾಕ್ಟರ್ ಮೂಲಕ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು. ಪ್ರಾಣಿಶಾಸ್ತ್ರ ವಿಭಾಗದಲ್ಲಿ ಕುಲಪತಿಗಳು ಸಸಿನೆಟ್ಟರು

ಈ ವೇಳೆ ಕವಿವಿಯ 39 ಪ್ರ್ರಾಧ್ಯಾಪಕರು, 297 ವಿದ್ಯಾರ್ಥಿಗಳು, ಎನ್.ಎಸ್.ಎಸ್.ಸ್ವಯಂ ಸೇವಕರು ಮತ್ತು ಕವಿವಿಯ ಎನ್.ಎಸ್.ಎಸ್.ಕೋಶದ ಸಂಯೋಜಕರು ಸೇರಿದಂತೆ ಶಿಕ್ಷಕೇತರರ ಸಿಬ್ಬಂದಿ, ಕವಿವಿ ಉದ್ಯಾನ ಸಿಬ್ಬಂದಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Leave a Reply

Your email address will not be published. Required fields are marked *

error: Content is protected !!