ಅತಿಯಾದ ತಣ್ಣೀರು ಕುಡಿದರೆ ಅಪಾಯ

303

ಪ್ರಜಾಸ್ತ್ರ ಲೈಫ್ ಸ್ಟೈಲ್

ಬೇಸಿಗೆ ಶುರುವಾಯಿತು ಅಂದರೆ ತಂಪಾದ ಪಾನೀಯಗಳ ಮೊರೆ ಹೋಗುವುದು ಸಾಮಾನ್ಯ. ಇದರ ಜೊತೆಗೆ ಅತಿಯಾದ ತಣ್ಣೀರು ಕುಡಿಯುವುದು ಅನೇಕರ ಸ್ವಭಾವ. ಹೀಗಾಗಿ ಫ್ರಿಜ್ ನಲ್ಲಿರುವ ಕೋಲ್ಡ್ ನೀರು ಹೆಚ್ಚಾಗಿ ಕುಡಿಯುತ್ತಾರೆ. ಆದರೆ, ಅತಿಯಾಗಿ ತಣ್ಣನೆಯ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ತುಂಬಾ ಕೋಲ್ಡ್ ಇರುವ ನೀರು ಕುಡಿಯುವುದರಿಂದ ಹೃದಯದ ಮೇಲೆ ಪರಿಣಾಮ ಬೀರುತ್ತೆ. ಕಡಿಮೆ ತಾಪಮಾನದ ನೀರು ಕುಡಿಯುವುದರಿಂದ ಹೃದಹದ ಬಡಿತವನ್ನು ಕಡಿಮೆ ಮಾಡುತ್ತೆ. ಇದರ ಜೊತೆಗೆ ಮಲಬದ್ಧತೆ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತೆ.

ಅತಿಯಾದ ತಣ್ಣೀರು ಸೇವನೆಯಿಂದ ಜೀರ್ಣಕ್ರಿಯೆ ಸರಿಯಾಗುವುದು. ಇದು ವಾಕರಿಕೆ, ಹೊಟ್ಟೆ ನೋವು ಸೇರಿ ಇತರೆ ತೊಂದರೆಯನ್ನುಂಟು ಮಾಡುತ್ತದೆ. ದೇಹದ ಕೊಬ್ಬು ಕರಗಿಸುವ ಬದಲು ಹೆಚ್ಚಾಗುವಂತೆ ಮಾಡುತ್ತದೆ. ಇನ್ನು ಫ್ರಿಜ್ ನಲ್ಲಿಟ್ಟು ಅತಿಯಾದ ತಣ್ಣನೆಯ ನೀರು ಕುಡಿದಾಗ ಬೆನ್ನುಮೂಳೆಯಲ್ಲಿನ ಸೂಕ್ಷ್ಮ ನರಗಳನ್ನು ತಂಪಾಗಿಸುತ್ತದೆ. ಇದು ತಕ್ಷಣ ಮೆದುಳಿಗೆ ಸಂದೇಶ ಕಳುಹಿಸಿದಾಗ ತಲೆ ನೋವು ಉಂಟಾಗುತ್ತೆ. ಹೀಗಾಗಿ ಅತಿಯಾದ ತಣ್ಣನೆಯ ನೀರು ಕುಡಿಯುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!