ಸಿಲಿಂಡರ್ ಬೆಲೆಯಲ್ಲಿ ಒಂದಿಷ್ಟು ಇಳಿಕೆ

143

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನವೆಂಬರ್ 1ರಿಂದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಒಂದಿಷ್ಟು ಇಳಿಕೆ ಕಂಡಿದೆ. 115.50 ರೂಪಾಯಿ ಕಡಿಮೆಯಾಗಿದೆ. ಹೀಗಾಗಿ ಆಯಾ ರಾಜ್ಯವಾರು ಬೆಲೆಯಲ್ಲಿ ಇಳಿಕೆ ಕಾಣುವ ಮೂಲಕ ಗ್ರಾಹಕರಿಗೆ ಒಂದಿಷ್ಟು ಹೊರೆ ಕಡಿಮೆಯಾಗಲಿದೆ.

ನವದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,859 ರೂಪಾಯಿಯಿಂದ 1,744 ರೂಪಾಯಿಗೆ ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಳಿತದ ಪರಿಣಾಮ ಈ ರೀತಿ ಹೆಚ್ಚು ಕಡಿಮೆ ಆಗಲಿದೆ.




Leave a Reply

Your email address will not be published. Required fields are marked *

error: Content is protected !!