ಅರೇಬಿಯನ್ ಶೈಲಿಯ ಜಮೀರ್ ಬಂಗಲೆ ಕಂಡು ಅಧಿಕಾರಿಗಳು ಬೆರಗು

301

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಹತ್ತಿರವಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಭವ್ಯವಾದ ಅರಮನೆ ನೋಡಿ ಬೆರಗಾಗಿದ್ದಾರೆ. ಇದೀಗ ಜಮೀರ್ ಖಾನ್ ಬಂಗಲೆಯೆ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ.

ಮನೆಯ ಇಂಟಿಯರ್ ಡಿಸೈನ್ ಸಂಪೂರ್ಣ ಅರೇಬಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದು ಗೋಡೆ, ಬಾಗಿಲು, ಕಿಟಕಿ ಸೇರಿದಂತೆ ಎಲ್ಲ ಕಡೆ ಚಿನ್ನದ ಬಣ್ಣ ಲೇಪನ ನೋಡುಗರ ಕಣ್ಣು ಕುಕ್ಕುವಂತಿದೆ. ಮನೆಯೊಳಗೆ ಒಮ್ಮೆ ಸಂಚರಿಸಿದರೆ ದೊಡ್ಡದಾದ ಅರಮನೆಯ ಒಳಗೆ ಸಂಚರಿಸಿದ ಅನುಭವವಾಗುತ್ತೆ. ಅಷ್ಟೊಂದು ಐಷಾರಾಮಿಯಾಗಿದೆ.




Leave a Reply

Your email address will not be published. Required fields are marked *

error: Content is protected !!