ವಿಜಯಪುರದ 4 ಕ್ಷೇತ್ರಗಳಿಗೆ ಕೈ ಟಿಕೆಟ್ ಅಂತಿಮ

218

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಎಐಸಿಸಿ ಟಿಕೆಟ್ ಘೋಷಿಸಿದೆ. ಇನ್ನು 100 ಕ್ಷೇತ್ರಗಳ ಟಿಕೆಟ್ ಮುಂದಿನ ಪಟ್ಟಿಯಲ್ಲಿ ಉಳಿಸಿಕೊಂಡಿದೆ. ಹೀಗಾಗಿ ವಿಜಯಪುರದ 4 ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಿಸಲಾಗಿದೆ.

ಮುದ್ದೇಬಿಹಾಳ, ಇಂಡಿ, ಬಬಲೇಶ್ವರ, ಬಸವನ ಬಾಗೇವಾಡಿ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಸಿಂದಗಿ, ದೇವರ ಹಿಪ್ಪರಗಿ, ವಿಜಯಪುರ ಹಾಗೂ ನಾಗಠಾಣ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಬೇಕಿದೆ. ಮುದ್ದೇಬಿಹಾಳ-ಸಿ.ಎಸ್ ನಾಡಗೌಡ, ಬಸವನ ಬಾಗೇವಾಡಿ-ಶಿವಾನಂದ ಪಾಟೀಲ, ಬಬಲೇಶ್ವರ- ಎಂ.ಬಿ.ಪಾಟೀಲ, ಇಂಡಿ- ಯಶವಂತ ರಾಯಗೌಡ ವಿ ಪಾಟೀಲ ಅವರಿಗೆ ಟಿಕೆಟ್ ನೀಡುವ ಮೂಲಕ ಪ್ರಸ್ತುತ ಕ್ಷೇತ್ರದಲ್ಲಿಯೇ ಸ್ಪರ್ಧಿಸಲು ಹೇಳಲಾಗಿದೆ.

ಶಿವಾನಂದ ಪಾಟೀಲ ಅವರು ಬಬಲೇಶ್ವರ ಕ್ಷೇತ್ರದಿಂದ ಟಿಕೆಟ್ ಕೇಳಿದರು. ಇವರ ಪುತ್ರಿ ವಿಜಯಪುರ ಹಾಗೂ ಬಸವನಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಎಐಸಿಸಿ ಹಾಲಿ ಶಾಸಕರಿಗೆ ಅವರು ಇರುವ ಕ್ಷೇತ್ರದಿಂದಲೇ ಟಿಕೆಟ್ ನೀಡಿದೆ.

ವಿಜಯಪುರ ನಗರದಲ್ಲಿ ಅಲ್ಪಸಂಖ್ಯಾತ ನಾಯಕರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಾಗಠಾಣ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು ಕಾಂತಾ ನಾಯಕ ಸೇರಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ದೇವರ ಹಿಪ್ಪರಗಿಯಲ್ಲಿ  ಸಿಂದಗಿ ಮಾಜಿ ಶಾಸಕ ಶರಣಪ್ಪ ಸುಣಗಾರ ಸೇರಿ ಅನೇಕರು ಟಿಕೆಟ್ ಗಾಗಿ ಫೈಟ್ ನಡೆಸಿದ್ದು, ಎಸ್.ಆರ್ ಪಾಟೀಲ ಹೆಸರು ತೀವ್ರವಾಗಿ ಕೇಳಿ ಬರುತ್ತಿದೆ. ಇನ್ನು ಸಿಂದಗಿಯಲ್ಲಿ ಅಶೋಕ ಮನಗೂಳಿ, ವಿಠ್ಠಲ ಕೊಳ್ಳೂರ, ರಾಕೇಶ ಕಲ್ಲೂರ ಟಿಕೆಟ್ ಗಾಗಿ ಫೈಟ್ ನಡೆಸಿದ್ದಾರೆ. ಆದರೆ, ಇಲ್ಲಿ ಮಾಜಿ ಶಾಸಕ ಸುಣಗಾರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ಸ್ಪರ್ಧೆ ಬಯಸಿದ್ದು ದೇವರ ಹಿಪ್ಪರಗಿಯಿಂದ. ಈ ಕಾರಣಕ್ಕೆ ಎಲ್ಲರಲ್ಲಿ ಮತ್ತಷ್ಟು ಟೆನ್ಷನ್ ಹೆಚ್ಚಿಸಿದೆ.

ಈಗ ಉಳಿದಿರುವ ನಾಲ್ಕು ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್ ಅನ್ನೋ ಕುತೂಹಲವಿದೆ. ಯಾಕಂದರೆ ಇಲ್ಲಿ ಕಾಂಗ್ರೆಸ್ ಶಾಸಕರು ಇಲ್ಲ. 3 ಕಡೆ ಬಿಜೆಪಿ, 1 ಕಡೆ ಜೆಡಿಎಸ್ ಶಾಸಕರಿದ್ದಾರೆ. ಹೀಗಾಗಿ ಈ ಬಾರಿ ಯಾರಿಗೆ ಟಿಕೆಟ್ ನೀಡಿದರೆ ಪ್ಲಸ್ ಆಗುತ್ತೆ ಅನ್ನೋ ಲೆಕ್ಕಾಚಾರ ನಡೆಸಿದ್ದು, ಕೈ ಟಿಕೆಟ್ ಆಕಾಂಕ್ಷಿಗಳಲ್ಲಿ ಢವಢವ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!