ಇಂದು ಸಹ 10 ಸಾವಿರ ದಾಟಿದ ಸೋಂಕಿತರು

307

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿನ ಹಾವಳಿ ಮುಂದುವರೆದಿದೆ. ಇಂದು ಸಹ 10 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 10,704 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 6,79,356 ಜನರಿಗೆ ಕೋವಿಡ್ 19 ತಗುಲಿದೆ.

9,613 ಜನರು ಇಂದು ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 5,52,519 ಜನರು ಗುಣಮುಖರಾಗಿದ್ದಾರೆ. ಇನ್ನು ಇಂದು 101 ಜನರು ಸಾವನ್ನಪ್ಪಿದ್ದು 9,675ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 98, ಬಳ್ಳಾರಿ 248, ಬೆಳಗಾವಿ 185, ಬೆಂ.ನ 368, ಬೆಂ.ನ 5,121, ಬೀದರ 27, ಚಾಮರಾಜನಗರ 68, ಚಿಕ್ಕಬಳ್ಳಾಪುರ 100, ಚಿಕ್ಕಮಗಳುರು 142, ಚಿತ್ರದುರ್ಗ 215, ದ.ಕ 296, ದಾವಣಗೆರೆ 238, ಧಾರವಾಡ 121, ಗದಗ 42, ಹಾಸನ 441, ಹಾವೇರಿ 108, ಕಲಬುರಗಿ 128, ಕೊಡಗು 94, ಕೋಲಾರ 129, ಕೊಪ್ಪಳ 97, ಮಂಡ್ಯ 206, ಮೈಸೂರು 642, ರಾಯಚೂರು 111, ರಾಮನಗರ 91, ಶಿವಮೊಗ್ಗ 250, ತುಮಕೂರು 509, ಉಡುಪಿ 239, ಉ.ಕ 213, ವಿಜಯಪುರ 110, ಯಾದಗಿರಿ 67 ಸೇರಿದಂತೆ 10,704 ಜನರಲ್ಲಿ ಕೋವಿಡ್ 19 ಸೋಂಕು ತಗುಲಿದೆ.




Leave a Reply

Your email address will not be published. Required fields are marked *

error: Content is protected !!