ಹತ್ತಿ ಕಳ್ಳತನ, ಮೂವರ ಬಂಧನ

115

ಪ್ರಜಾಸ್ತ್ರ ಅಪರಾಧ ಸುದ್ದಿ

ಜೇವರ್ಗಿ: ಕಲಬುರಗಿ ಜಿಲ್ಲೆಯ ತಾಲೂಕುಗಳಲ್ಲಿ ದಿನೆದಿನೆ ಹತ್ತಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದವು. ಈ ಪ್ರಕರಣದ ಬೆನ್ನು ಹತ್ತಿದ  ನೇಲೋಗಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಲಕ್ಷ್ಮೀಕಾಂತ ಲಾಲಪ್ಪ ಹರಳಯ್ಯ, ಲಕ್ಷ್ಮಣ ಕಲ್ಲಪ್ಪ ಸಿಂದಗಿ ಹಾಗೂ ಹುಸೇನವಲಿ ಮಹಿಬೂಬ ಖಾಸೀಂ ಶೇಖ್ ಬಂಧಿತ ಆರೋಪಿಗಳು. ಕಳ್ಳತನದ ಹತ್ತಿ ಮಾರಟದಿಂದ ಬಂದಿದ್ದ 1 ಲಕ್ಷದ 62 ಸಾವಿರ ರೂಪಾಯಿ, ಕೃತ್ಯಕ್ಕೆ ಬಳಸಿದ್ದ ಬುಲೇರೊ ಪಿಕಪ್ ವಾಹನ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೇವರ್ಗಿ ಸಿಪಿಐ ಹಾಗೂ ನೇಲೋಗಿ ಪಿಎಸ್ಐ ಗಜಾನಂದ ಬಿರಾದಾರ ಅವರ ಮಾರ್ಗದರ್ಶನದಲ್ಲಿ   ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ವೀರಶೆಟ್ಟಿ ಪಾಟೀಲ್, ಎಎಸ್ಐ ಗುರುಬಸಪ್ಪ, ಕಾನ್ಸ್ ಟೇಬಲ್ ಗಳಾದ ಜಗನ್ನಾಥ ಪಾಟೀಲ್, ಶಿವು ಹಳೆಪ್ಪಗೋಳ ಹಾಗೂ ಸುರೇಶ ತಳವಾರ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಲಬುರಗಿ ಪೊಲೀಸ್ ಅಧೀಕ್ಷಕರು ಹಾಗೂ  ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.
Leave a Reply

Your email address will not be published. Required fields are marked *

error: Content is protected !!