ಸರ್ಕಾರಕ್ಕೆ ಕರೋನಾ ರಾಜಕೀಯ ಅಸ್ತ್ರವಾಗ್ತಿದ್ಯಾ?

240

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಎರಡು ವರ್ಷಗಳ ವಿಶ್ವದ ಜನರ ಜೀವ ಹಾಗೂ ಜೀವನವನ್ನು ಹಾಳು ಮಾಡಿದ ಕರೋನಾ ಅನ್ನೋ ಮಹಾಮಹಾರಿ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಹೀಗಾಗಿ ಭಾರತದಲ್ಲಿಯೂ ಮಾಸ್ಕ್ ಕಡ್ಡಾಯ ಸೇರಿದಂತೆ ಹಲವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ರಾಜಕೀಯ ಅಸ್ತ್ರವಾಗ್ತಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ.

ಪಕ್ಷಗಳ ಸಾಲು ಸಾಲು ರ್ಯಾಲಿ, ಸಮಾವೇಶಗಳು ಸೇರಿದಂತೆ ಚುನಾವಣೆಯ ರಣತಂತ್ರಗಳನ್ನು ಕಟ್ಟಿ ಹಾಕುವ ಹಿನ್ನಲೆಯಲ್ಲಿ ಕರೋನಾ ಸೋಂಕು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಿಮಾಚಲ, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿವೆ. ಈಗ ಕರ್ನಾಟಕ ಚುನಾವಣೆ ಮುಂದಿದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕರೋನಾ ಮಾರ್ಗಸೂಚಿಯ ನೆಪದಲ್ಲಿ ಸಮಾವೇಶಗಳನ್ನು ಮಾಡದೆ, ವಿಪಕ್ಷಗಳು ಜನರ ಬಳಿ ಹೆಚ್ಚಿನ ಪ್ರಮಾಣದಲ್ಲಿ ಹೋಗದಂತೆ ಕಟ್ಟಿ ಹಾಕುವ ಉದ್ದೇಶ ಹೊಂದಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದು, ಸರ್ಕಾರ ಏನು ಹೇಳುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!