ಸಿಲಿಕಾನ್ ಸಿಟಿಯಲ್ಲಿನ 20 ಕರೋನಾ ಹಾಟ್ ಸ್ಪಾಟ್ ಇಲ್ಲಿವೆ

348

ಬೆಂಗಳೂರು: ಕರುನಾಡಿನಲ್ಲಿ ಕರೋನಾ ಹಾವಳಿ ಜೋರಾಗುತ್ತಿದೆ. ಇದ್ರಿಂದಾಗಿ ಇಡೀ ರಾಜ್ಯ ತಲ್ಲಣಿಸಿದೆ. ಅದರಲ್ಲೂ ರಾಜಧಾನಿಯಲ್ಲಿ ಬರೋಬ್ಬರಿ 70ಕ್ಕೆ ಏರಿಕೆಯಾಗಿದೆ. ಹೀಗಾಗಿ ಸಿಲಿಕಾನ್ ಸಿಟಿ ಜನ ಕಂಗಾಲಾಗಿದ್ದಾರೆ. ಅದರಲ್ಲೂ 20 ಏರಿಯಾಗಳು ಹಾಟ್ ಸ್ಪಾಟ್ ಎನ್ನಲಾಗಿದೆ.

ಬೆಂಗಳೂರು ದಕ್ಷಿಣ ವಲಯದ ಜೆಪಿ ನಗರ, ಜಯನಗರ, ಬಸವನಗುಡಿ, ವಿಜಯನಗರ, ಮೂಡಲಪಾಳ್ಯ, ನಾಗರಭಾವಿ, ಹಂಪಿನಗರ, ಬಾಪೂಜಿನಗರ, ಬಿಟಿಎಂ ಲೇಔಟ್, ಕೋರಮಂಗಲ, ಆಡುಗೋಡಿ, ಬನಶಂಕರಿ, ಪದ್ಮಾನಗರ. ಈ 13 ಏರಿಯಾಗಳಲ್ಲಿ 15ಜನ ಸೋಂಕಿತರು. ಬಾಪೂಜಿನಗರ ವಾರ್ಡ್ ಸೀಲ್ ಡೌನ್ ಆಗಿದೆ.

ಡೇಂಜರ್ ಝೋನ್ ನಲ್ಲಿರುವ ಏರಿಯಾಗಳು

ಬೊಮ್ಮನಹಳ್ಳಿ-04( ಹೆಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ಉತ್ತರಹಳ್ಳಿ, ಪುಟ್ಟೇನಹಳ್ಳಿ)

ಯಲಹಂಕ-2(ಥಣಿಸಂದ್ರ, ಜಕ್ಕೂರು, ಯಲಹಂಕ, ಕೋಗಿಲುಕ್ರಾಸ್, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಕೊಡಿಗೇಹಳ್ಳಿ)

ಆರ್.ಆರ್ ನಗರ-01( ಜಾಲಹಳ್ಳಿ, ಜೆಪಿ ಪಾರ್ಕ್, ರಾಜರಾಜೇಶ್ವರಿ ನಗರ, ಕೆಂಗೇರಿ)

ಮಹದೇವಪುರ-10(ಕೆ.ಆರ್ ಪುರ, ಹೂಡಿ, ದೇವಸಂದ್ರ, ಎ ನಾರಾಯಣಪುರ, ವೈಟ್ ಫಿಲ್ಡ್, ಬೆಳ್ಳಂದೂರು, ವರ್ತೂರು)

ದಕ್ಷಿಣಪೂರ್ವದಲ್ಲಿ ಆರ್.ಟಿ ನಗರ, ಸಂಜಯನಗರ, ಹೆಬ್ಬಾಳ, ಕಮ್ಮನಹಳ್ಳಿ, ನಾಗಾವರ, ಕೆಜಿ ಹಳ್ಳಿ, ಡಿಜಿ ಹಳ್ಳಿ, ಬಾಣಸವಾಡಿ, ಜೆಪಿ ನಗರ, ಬಾಣಸವಾಡಿ, ಜಿಸಿ ನಗರ, ಇಂದಿರಾನಗರ, ಸಿವಿ ರಾಮನ್ ನಗರ, ಶಾಂತಿನಗರ, ಶಿವಾಜಿನಗರ, ನೀಲಸಂದ್ರ, ವಸಂತನಗರ ಜನತೆ ಆತಂಕದಲ್ಲಿದ್ದಾರೆ.

ಅದೆ ರೀತಿ ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಗಾಂಧಿನಗರ, ಬಸವೇಶ್ವರ ನಗರ, ಜೆಪಿ ನಗರ, ನಾಯಂಡಹಳ್ಳಿ ಲಾಕ್ ಡೌನ್ ಬಿಗಿಗೊಳಿಸಲಾಗಿದೆ. ಹೀಗಾಗಿ ಬೆಂಗಳೂರಿನ ಜನರು ಕರೋನಾ ವಿಚಾರದಲ್ಲಿ ಹುಡುಗಾಟ ಆಡುವುದನ್ನ ನಿಲ್ಲಿಸಬೇಕು.




Leave a Reply

Your email address will not be published. Required fields are marked *

error: Content is protected !!