ಈ ದೇಶಗಳಿಂದ ಭಾರತಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ಕಡ್ಡಾಯ

142

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಸೋಂಕು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಹೊರ ದೇಶಗಳಿಂದ ಭಾರತಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ಕಡ್ಡಾಯಗೊಳಿಸಲಾಗಿದೆ.

ಚೀನಾ, ಕೋರಿಯಾ, ಜಪಾನ್, ಥಾಯ್ಲೆಂಡ್, ಸಿಂಗಾಪುರ್, ಹಾಂಕಾಂಗ್ ದೇಶಗಳಿಂದ ಬರುವವರಿಗೆ ಆರ್ ಟಿಪಿಸಿಆರ್ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ನೆಗಟಿವ್ ವರದಿ ಸಲ್ಲಿಸಿದರೆ ಮಾತ್ರ ದೇಶದೊಳಗೆ ಪ್ರವೇಶ. ಹೀಗಾಗಿ ವರದಿಯ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಚೆಕ್ ಇನ್ ಸಮಯದಲ್ಲಿ ಬೋರ್ಡಿಂಗ್ ಪಾಸ್ ನೀಡುವಂತೆ ಏರ್ ಲೈನ್ಸ್ ಗಳಿಗೆ ಸೂಚಿಸಲಾಗಿದೆ.

ಇನ್ನು ಪ್ರಯಾಣ ಆರಂಭಿಸುವ 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಟಿಪಿಸಿಆರ್ ವರದಿ ಮಾತ್ರ ಅನ್ವಯವಾಗುತ್ತದೆ. ದೇಶದಲ್ಲಿ ಕೋವಿಡ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಸಕಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!