ಸಿಪಿಎಂ ಅಸ್ತಿತ್ವದ ಪ್ರಶ್ನೆ..!

1356

ದೇಶದಲ್ಲಿ ಸಿಪಿಎಂ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ ಅನ್ನೋ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಸಿಪಿಎಂ ಎದುರಿಸುತ್ತಿರುವ ಸಂಕಷ್ಟವನ್ನು ನೋಡಿದ್ರೆ, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನೆಲಕಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತ್ರಿಪುರಾದಲ್ಲಿ ದಶಕಗಳ ಕಾಲ ಸಿಪಿಎಂ ಆಡಳಿತ ನಡೆಸಿತ್ತು. ಆದ್ರೆ, ಇದೀಗ ಬಿಜೆಪಿ ಎದುರು ಸೋತು ನೆಲಕಚ್ಚಿದೆ. ಪಶ್ಚಿಮ ಬಂಗಾಳದಲ್ಲಿ 7 ವರ್ಷಗಳ ಹಿಂದೆಯೇ ತೃಣಮೂಲ ಕಾಂಗ್ರೆಸ್‌ ಎಡಪಕ್ಷವನ್ನು ಇನ್ನಿಲ್ಲದಂತೆ ಮಾಡಿದೆ. ಬಂಗಾಳದ ರಾಜಕೀಯದಲ್ಲಿ ಸಿಪಿಎಂ ಅಸ್ತಿತ್ವ ಕಳೆದುಕೊಳ್ಳುತ್ತಿದ್ದರೆ, ಬಿಜೆಪಿ ಬಲವಾಗಿ ಬೇರೂರುತ್ತಿದೆ. ಈ ರಾಜಕೀಯ ಬೆಳವಣಿಗೆಯನ್ನು ಗಮನಿಸಿದಾಗ, ಸಿಪಿಎಂ ಎಲೆಕ್ಷನ್ ಕ್ಕೂ ನಿಂತುಕೊಳ್ಳಲು ಹಿಂದೇಟು ಹಾಕುತ್ತಿದೆ.

 ಕಳೆದ 34 ವರ್ಷಗಳ ಕಾಲ ಸತತ ಆಡಳಿತ ನಡೆಸಿದ ಸಿಪಿಎಂ ಬಂಗಾಳದಲ್ಲಿ ನೆಲೆಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ. ಆದರೆ, ಸಿಪಿಎಂ ಜತೆ ಗುರುತಿಸಿಕೊಂಡಿರುವ ನಾಯಕರು ಸೋಲಿನ ಸಾಧ್ಯತೆಯನ್ನು ಒಪ್ಪಲು ಸಿದ್ಧವಿಲ್ಲ


TAG


Leave a Reply

Your email address will not be published. Required fields are marked *

error: Content is protected !!