‘15 ವರ್ಷ ಇದ್ದಾಗಲೇ ಅತ್ಯಾಚಾರಕ್ಕೆ ಒಳಗಾದೆ’

433

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಾಲಿವುಡ್ ಸಿಂಗರ್, ಸಾಂಗ್ ರೈಟರ್ ಡೆಮಿ ಲೊವಾಟೊ, ತನ್ನ ಹಿಂದಿನ ಕೆಲ ಕಹಿ ಘಟನೆಗಳನ್ನ ಹಂಚಿಕೊಂಡಿದ್ದಾರೆ. ಡೆಮಿ ಲೊವಾಟೊ: ಡ್ಯಾನ್ಸಿಂಗ್ ವಿಥ್ ಡೆವಿಲ್ ಅನ್ನೋ ತನ್ನ ಸಾಕ್ಷ್ಯಚಿತ್ರದ ಕುರಿತು ಮಾತ್ನಾಡಿರುವ ಸಂದರ್ಭದಲ್ಲಿ, ಎರಡು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ.

ಒಮ್ಮೆ 15 ವರ್ಷದವಳಿದ್ದಾಗ ತನ್ನ ಮೇಲೆ ಅತ್ಯಾಚಾರವಾಗಿದೆ. ಅಲ್ದೇ, 2018ರಲ್ಲಿಯೂ ಒಮ್ಮೆ ಅವರ ಮೇಲೆ ಅತ್ಯಾಚಾರವಾಗಿದೆ ಎಂದಿದ್ದಾರೆ. ಅತಿಯಾದ ಮಾದಕ ವಸ್ತು ಸೇವನೆ ಮಾಡಿದ ವ್ಯಕ್ತಿಯಿಂದ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂದು ಹೇಳಿದ್ದಾರೆ. ಇನ್ನು ಡೆಮಿ ಸಾಕ್ಷ್ಯಚಿತ್ರ ಮಾರ್ಚ್ 23, 2021ಕ್ಕೆ ಯುಟ್ಯೂಬ್ ನಲ್ಲಿ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!