ದೀದಿ ವರ್ಸಸ್ ಡಾಕ್ಟರ್ಸ್: ಮೊದ್ಲು ಕ್ಷಮೆ ಆಮೇಲೆ ಸಭೆ

357

ಕೋಲ್ಕತ್ತಾ: ಕಳೆದ ನಾಲ್ಕು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಜ್ಯೂನಿಯರ್ ವೈದ್ಯರ ಮುಷ್ಕರ ಸಿಎಂ ಮಮತಾ ಬ್ಯಾನರ್ಜಿಗೆ ತಲೆ ನೋವು ತಂದಿದೆ. ಇಂದು ದೀದಿ ಕರೆದಿರುವ ಸಭೆಗೆ ಜ್ಯೂನಿಯರ್ ಡಾಕ್ಟರ್ಸ್ ಷರತ್ತು ವಿಧಿಸಿದ್ದು, ಮೊದ್ಲು ಅವರು ಕ್ಷಮೆ ಕೇಳಬೇಕು ಅಂತಾ ಹೇಳಿದ್ದಾರೆ. ಅವರೆ ಎನ್ಆರ್ ಐ ಆಸ್ಪತ್ರೆಗೆ ಬಂದು ಕ್ಷಮೆ ಕೇಳಬೇಕು ಅಂತಿದ್ದಾರೆ.

ನಾವು ಅವರು ಕರೆದಲ್ಲಿಗೆ ಹೋಗುವುದಿಲ್ಲ. ನಾವು ಇರುವಲ್ಲಿಗೆ ಅವರು ಬರ್ಲಿ ಅಂತಾ ಹೇಳಿದ್ದಾರೆ. ನಿನ್ನೆ ಕೋಲ್ಕತ್ತಾ ಎಸ್ಎಸ್ ಕೆಎಂ ಆಸ್ಪತ್ರೆಗೆ ಸಿಎಂ ಮಮತಾ ಬ್ಯಾನರ್ಜಿ ಹೋಗಿದ್ರೂ ಸಂಧಾನ ಕಾರ್ಯ ಯಶಸ್ವಿಯಾಗಿಲ್ಲ. ಈಗಾಗ್ಲೇ 450ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಪ್ರತಿಭಟನೆ ಜೋರಾಗಿದ್ದು, ರೋಗಿಗಳ ಪರದಾಟ ಮುಗಿಲು ಮುಟ್ಟಿದೆ.

ಕೋಲ್ಕತ್ತಾದ ವೈದ್ಯರಿಗೆ ದೆಹಲಿ, ಒಡಿಸ್ಸಾ, ಮಹಾರಾಷ್ಟ್ರ ಸೇರಿದಂತೆ ಉಳಿದ ರಾಜ್ಯಗಳ ವೈದ್ಯರು ಸಹ ಸಾಥ್ ಕೊಡ್ತಿದ್ದು, ಒಂದು ದಿನ ಸಾಂಕೇತಿಕ ಪ್ರತಿಭಟನೆ ಮಾಡುವ ಭರವಸೆ ನೀಡಿದ್ದಾರೆ. ಇಬ್ಬರು ಜ್ಯೂನಿಯರ್ ವೈದ್ಯರ ಮೇಲೆ ಕುಟುಂಬವೊಂದು ಹಲ್ಲೆ ಮಾಡಿತ್ತು. ಅದೀಗ ವ್ಯಾಪಕ ಸ್ವರೂಪ ಪಡೆದುಕೊಂಡಿದೆ.


TAG


Leave a Reply

Your email address will not be published. Required fields are marked *

error: Content is protected !!