ಕುಳ್ಳರ ಕುಟುಂಬದ ಕಣ್ಣೀರ ಕಥೆ

965

ಇಲ್ಲೊಂದು ಫ್ಯಾಮಿಲಿ ಇದೆ. ಇತಹದೊಂದು ಕುಟುಂಬವನ್ನ ನೀವು ಇದುವರೆಗೂ ಎಲ್ಲಿಯೂ ನೋಡಿರೋದಿಲ್ಲ. ಈ ಮನೆಯಲ್ಲಿ ಇರೋ 21 ಮಂದಿಯಲ್ಲಿ 18 ಮಂದಿ ಅತ್ಯಂತ ಕುಳ್ಳರು. ಭಾರತದಲ್ಲಿರುವ ಈ ಕುಬ್ಜ ಕುಟುಂಬದ ವಿಶೇಷ ಸ್ಟೋರಿ ಇಲ್ಲಿದೆ.

ಈ ಸ್ಟೋರಿ ಓದುವ ನಿಮ್ಗೆ ಖಂಡಿತ ವಿಚಿತ್ರ ಅನಿಸುತ್ತೆ. ಅದ್ಹೇಗೆ ಇವರೆಲ್ಲ ಇಷ್ಟೊಂದು ಕುಳ್ಳಗೆ ಇರಲು ಸಾಧ್ಯ. ಅದು ಒಂದೇ ಕುಟುಂಬದಲ್ಲಿ 18 ಮಂದಿ ಈ ರೀತಿ ಕಡಿಮೆ ಬೆಳವಣಿಗೆ ಹೊಂದಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡುವುದು ಸಹಜ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರವಿದೆ.

ಈ ಕುಳ್ಳರ ಕುಟುಂಬ ಇರೋದು ತೆಲಂಗಾಣದ ಹೈದ್ರಾಬಾದ್ ನಲ್ಲಿ. ರಾಮ್ ರಾಜ್ ಚೌಹ್ಹಾಣ್ ಈ ಕುಟುಂಬದ ಮುಖ್ಯಸ್ಥ. ಇವರ ಕುಟುಂಬದಲ್ಲಿ ಹೆಚ್ಚಾಗಿ ಇರೋದು ಮಹಿಳೆಯರು. ಇದು ನಿಜಕ್ಕೂ ಸವಾಲಿನ ಸಂಗತಿ ಅಂತಾರೆ. ಇವರು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ರೆ, ಎಲ್ಲರೂ ಇವರನ್ನೇ ಕುತೂಹಲದಿಂದ ನೋಡ್ತಾರೆ. ಹತ್ತಾರ ಪ್ರಶ್ನೆಗಳನ್ನ ಕೇಳ್ತಾರೆ. ಫೋಟೋಗಳನ್ನ ತೆಗೆದುಕೊಳ್ಳಲು ಮುಗಿ ಬೀಳ್ತಾರೆ.

ಇಷ್ಟೊಂದು ಕುಳ್ಳಗಿರುವ ಕುಟಂಬದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದ್ರೆ, ಅದೆಲ್ಲವನ್ನೂ ಇವರು ಮೆಟ್ಟಿ ನಿಂತಿದ್ದಾರೆ. 52 ವರ್ಷದ ರಾಮ್ ರಾಜ್ ಅವರಿಗೆ ಯಾರು ಕೆಲಸ ಕೊಡಲ್ವಂತೆ. ಎಲ್ಲೆಡೆ ಅಲೆದು ಅಲೆದು ಸಾಕಾಗಿ, ತಾವೇ ಒಂದು ಮ್ಯಾರೇಜ್ ವೆಲ್ ಕಮ್ಮರ್ ಅನ್ನೋ ಶಾಪ್ ಶುರು ಮಾಡಿದ್ರಂತೆ. ಇದರ ಮೂಲಕ ಮದುವೆಗೆ ಡ್ರೆಸ್ ಗಳನ್ನ ರೆಡಿ ಮಾಡಿಕೊಡುವುದು. ಇವರ ಕೆಲಸಕ್ಕೆ ಮನೆಯವರು ಸಾಥ್ ನೀಡಿದ್ದಾರೆ.

ರಾಮ್ ರಾಜ್ ಅವರ 27 ವರ್ಷದ ಮಗಳು ಅಂಬಿಕಾ ಅಕೌಂಟೆಂಟ್. ಆದ್ರೆ, ಅವಳು ಸಹ ಅತ್ಯಂತ ಕುಳ್ಳಗೆ ಇರೋದ್ರಿಂದ ಅವಳು ಕೆಲಸದ ಸಮಸ್ಯೆ ಎದುರಿಸ್ತಿದ್ದಾಳೆ. ಮುಂದೊಂದು ನಾನು ಅಕೌಂಟೆಂಟ್ ಆಗುತ್ತೇನೆ. ಅಲ್ಲಿಯವರೆಗೂ ಈ ಕೆಲಸ ಮಾಡ್ತೀನಿ ಅಂತಾಳೆ. ರಾಮ್ ರಾಜ್ ಅವರ ಹಿರಿಯ ಅಣ್ಣ ಪೃಥ್ವಿರಾಜ್ ತೀರಿಕೊಂಡಿದ್ದಾರೆ. ಕಿರಿಯ ತಮ್ಮ ಕಿರಾಣಿ ಅಂಗಡಿ ಇಟ್ಟಿದ್ದಾನೆ. ಇವರ ಹೆಂಡ್ತಿ ಟೇಲರಿಂಗ್ ಕೆಲಸ ಮಾಡ್ತಾರೆ. ಮನೆಯಲ್ಲಿ 21 ಜನ ಸದಸ್ಯರಿದ್ದು ಅದರಲ್ಲಿ 18 ಜನ ಕುಬ್ಜರಿದ್ದಾರೆ. ನಾಲ್ಕು ಜನ ಸಹೋದರರು, 7 ಜನ ಸಹೋದರಿಯರು ಸೇರಿ 18 ಮಂದಿ ಕುಬ್ಜರಿದ್ದಾರೆ. ಹೀಗಾಗಿ ಹೆಣ್ಮಕ್ಕಳ ವೈವಾಹಿಕ ಜೀವನಕ್ಕೆ ತೊಂದರೆಯಾಗಿದೆ.

ಹೀಗೆ ಕುಳ್ಳಗೆ ಇರೋದ್ರಿಂದ ನಡೆಯಲು ಸಾಕಷ್ಟು ತೊಂದರೆಯಾಗ್ತಿದೆ. ವಯಸ್ಸು ಆಗ್ತಿದ್ದಂತೆ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡು ಬಿಡುತ್ತವೆ ಅಂತೆ. ಇದನ್ನ ರಾಮ್ ರಾಜ್ ತಂದೆಯೂ ಅನುಭವಿಸಿದ್ದಾರಂತೆ. ಆದ್ರೆ, ಇದು ದೇವರು ನಮ್ಗೆ ಕೊಟ್ಟಿರುವ ಉಡುಗರೆ. ನೋಡಿ ನಗುವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಇದು ಆಂಜನೇಯನ ರೂಪವಿದಂತೆ ಅಂತಾ ಹೇಳಿದ್ರು ಅಂತಾರೆ ರಾಮ್ ರಾಜ್. ಇನ್ನು ರಾಮ್ ರಾಜ್ ಅವರ ಪತ್ನಿ ಸಾಮಾನ್ಯರಂತೆ ಇದ್ದು, 1993ರಲ್ಲಿ ಏಳು ತಿಂಗಳು ಗರ್ಭೀಣಿ ಇದ್ದ ಟೈಂನಲ್ಲಿ ಸಾವನ್ನಪ್ಪಿದ್ರಂತೆ.

ಕುಬ್ಜತೆ ಅನ್ನೋದು ದೇವರ ವಿಶೇಷ ಉಡುಗರೆ ಅನ್ನೋದು ಇವರ ನಂಬಿಕೆ. ಆದ್ರೆ, ಈ ಕುಟುಂಬದ ಕಣ್ಣೀರ ಕಥೆ ಹಿಂದೆ ನಿಜಕ್ಕೂ ಇರೋದು ಅಹೊಂಡ್ರೊಪ್ಲಾಸಿಯಾ ಅನ್ನೋ ಆನುವಂಶಿಕ ಕಾಯಿಲೆ. ಇದ್ರಿಂದ ದೈಹಿಕವಾಗಿ ಬೆಳವಣಿಗೆ ಆಗೋದಿಲ್ಲ. ಕೈ ಹಾಗೂ ಕಾಲುಗಳು ದಪ್ಪವಾಗಿರುತ್ತವೆ. ವಯಸ್ಸಾದಂತೆ ಶಕ್ತಿ ಕಳೆದುಕೊಳ್ಳುವುದ್ರಿಂದ ಕೆಲಸ ಮಾಡಲು ಆಗೋದಿಲ್ಲ. ನಡೆಯಲು ಸಹ ಬೇರೆಯವರ ಸಹಾಯ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗುತ್ತೆ. ನೋಡುವ ಜನಕ್ಕೆ ಇದು ಕುತೂಹಲಕಾರಿಯಾಗಿ ಕಾಣಿಸಿದ್ರೂ ಇವರ ಬದುಕು ಮಾತ್ರ ನಿಜಕ್ಕೂ ಅತ್ಯಂತ ಕಷ್ಟದಿಂದ ಕೂಡಿದೆ.

ಈ ರೀತಿ ಕುಬ್ಜವಾಗಿರೋದ್ರಿಂದ ಇವರಿಗೆ ಯಾವುದೇ ಕೆಲಸದ ಭದ್ರತೆಯಿಲ್ಲ. ಆರ್ಥಿಕ ಭದ್ರತೆಯಿಲ್ಲ. ನೌಕರಿ ಸಿಗ್ತಿಲ್ಲ. ಹೀಗಾಗಿ ಒಬ್ಬೊಬ್ಬರು ಒಂದೊಂದು ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ಆದ್ರೆ, ಮದುವೆ, ಗಂಡ, ಮಕ್ಕಳು ಅಂತಾ ಕನಸು ಕಾಣುವ ಕಣ್ಣುಗಳಲ್ಲಿ ನೋವು, ಸಂಕಟ, ಯಾತನೆ ತುಂಬಿಕೊಂಡಿದೆ. ನೋಡುಗರಿಗೆ ಕಾಣುವ ನಗುವ ಮುಖದ ಹಿಂದೆ ಹೇಳಿಕೊಳ್ಳಲಾಗದಷ್ಟು ನೋವು ತುಂಬಿಕೊಂಡಿದೆ. ಇಂಥಾ ಸ್ಥಿತಿ ಯಾರಿಗೂ ಬಾರದೇ ಇರ್ಲಿ ಅನ್ನೋದು ಎಲ್ಲರ ಆಸೆಯಾಗಿದೆ.


TAG


Leave a Reply

Your email address will not be published. Required fields are marked *

error: Content is protected !!