‘ಯಂಗ್ ರೆಬಲ್’ಗೆ ಸುಕ್ಕಾ ಸೂರಿ ಡೈರೆಕ್ಷನ್

278

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರೆಬಲ್ ಸ್ಟಾರ್ ಅಂಬರೀಶ ಹಾಗೂ ನಟಿ, ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕಗೆ, ಸುಕ್ಕಾ ಸೂರಿ ಡೈರೆಕ್ಷನ್ ಮಾಡಲಿದ್ದಾರೆ ಅನ್ನೋ ಸುದ್ದಿ ಗಾಂಧಿ ನಗರದಲ್ಲಿ ಭರ್ಜರಿಯಾಗಿ ಹರಿದಾಡ್ತಿದೆ. ಅಮರ ಚಿತ್ರದ ಮೂಲಕ ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟಿರುವ ಅಭಿಗೆ ಇದೀಗ ಮಾಸ್ ನಿರ್ದಶಕ ಆಕ್ಷನ್ ಕಟ್ ಹೇಳಲಿದ್ದಾರಂತೆ.

ನಟ ಅಭಿಷೇಕಗೆ ಹೊಂದುವಂತಹ ಕಥೆಯನ್ನ ನಿರ್ದೇಶಕ ಸೂರಿ ರೆಡಿ ಮಾಡಿಕೊಂಡಿದ್ದು, ಇದಕ್ಕಾಗಿ ಪೂರ್ವ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸೂರಿಯ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಸುಧೀರ ಅರಸ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದಾರೆ.

ಮೊದಲ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ನಟ ಅಭಿ, ಇದೀಗ ಆ್ಯಕ್ಷನ್ ಮೂವಿಯಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಹೀಗಾಗಿ ಸಿನಿ ಪ್ರೇಕ್ಷಕರಲ್ಲಿ ಒಂದಿಷ್ಟು ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!