ಆಕ್ರೋಶದ ಬಳಿಕ ಕ್ಷಮೆ ಕೇಳಿದ ಸಂಸದ ಬದ್ರುದ್ದೀನ್ ಅಜ್ಮಲ್

200

ಪ್ರಜಾಸ್ತ್ರ ಸುದ್ದಿ

ದಿಸ್ಪುರ್ (ಅಸ್ಸಾಂ): ಜನಸಂಖೆ ಬೆಳವಣಿಗೆಗೆ ಸಂಬಂಧಿಸಿದಂತೆ ಹಿಂದೂಗಳು ಮುಸ್ಲಿಂರ ಸೂತ್ರವನ್ನು ಬಳಸಿಕೊಳ್ಳಬೇಕು. ಹುಡುಗಿಯರಿಗೆ 18-20ರೊಳಗೆ ಹಾಗೂ ಹುಡುಗರಿಗೆ 22ನೇ ವರ್ಷಕ್ಕೆ ಮದುವೆ ಮಾಡಬೇಕು. 35-40ನೇ ವಯಸ್ಸಿನಲ್ಲಿ ಮದುವೆಯಾದರೆ ಅದ್ಹೇಗೆ ಮಕ್ಕಳಾಗುತ್ತವೆ ಎಂದು ಸಂಸದ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಎಐಯುಡಿಎಫ್ ಅಧ್ಯಕ್ಷ ಹಾಗೂ ಸಂಸದರ ಹೇಳಿಕೆಯನ್ನು ಎಲ್ಲೆಡೆ ಖಂಡಿಸಲಾಯಿತು. ಇದರಿಂದ ಎಚ್ಚೆತ್ತುಕೊಂಡ ಅಜ್ಮಲ್, ನಾನು ಯಾರ ಭಾವನೆಗಳಿಗೆ ಧಕ್ಕೆ ತರಬೇಕು ಎಂದು ಈ ರೀತಿ ಹೇಳಿಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ. ಕ್ಷಮಿಸಿ ಎಂದು ಹೇಳಿದ್ದಾರೆ.

ನೀವು ಫಲವತ್ತಾದ ಭೂಮಿಯಲ್ಲಿ ಬಿತ್ತಿದರೆ ಮಾತ್ರ ಉತ್ತಮ ಬೆಳೆಗಳನ್ನು ಹೊಂದಬಹುದು. 40 ವರ್ಷದ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ಹೇಗೆ ನಿರೀಕ್ಷಿಸುತ್ತೀರಿ? ಹೀಗಾಗಿ 20-22ನೇ ವಯಸ್ಸಿಗೆ ಮದುವೆ ಮಾಡಬೇಕು. ನೀವೂ ಲವ್ ಜಿಹಾದ್ ನಡೆಸಿ. ನಾಲ್ಕೈದು ಮುಸ್ಲಿಂ ಹೆಣ್ಮಕ್ಕಳನ್ನು ಕರೆದುಕೊಂಡು ಹೋಗಿ. ನಾವು ಜಗಳವಾಡುವುದಿಲ್ಲ. ನಿಮ್ಮಲ್ಲಿ ಎಷ್ಟು ಶಕ್ತಿಯಿದೆ ಎಂದು ನೋಡಬಹುದು ಅಂತಾ ಸಾಕಷ್ಟು ವಿವಾದಾತ್ಮಕ ಮಾತುಗಳನ್ನು ಆಡಿದ್ದರು.

ಅಜ್ಮಲ್ ಹೇಳಿಕೆ ಖಂಡಿಸಿ ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಶನಿವಾರ ತೇಪೆ ಹಚ್ಚುವ ಕೆಲಸ ಮಾಡಿದ್ದು, ಸರ್ಕಾರ ಅಲ್ಲಸಂಖ್ಯಾತರಿಗೆ ನ್ಯಾಯ ಕೊಡಿಸಬೇಕು. ಶಿಕ್ಷಣ, ಉದ್ಯೋಗ ನೀಡಬೇಕು ಎಂದು ಹೇಳುತ್ತೇನೆ ಎಂದಿದ್ದಾರೆ.
Leave a Reply

Your email address will not be published. Required fields are marked *

error: Content is protected !!