ರಿಷಬ್ ಕಾಂತಾರ ರೀಲ್ಸ್, ಅನುಕರಣೆ ಬೇಡ ಅನ್ನೋದ್ಯಾಕೆ?

295

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಮೂವಿ ಬಿಗ್ ಸಕ್ಸಸ್ ಕಂಡಿದೆ. ತುಳು ಸಂಪ್ರದಾಯ ಹಾಗೂ ಕರಾವಳಿ ಭಾಗದ ದೈವಾರಾಧನೆ ಕುರಿತು ಮಾಡಿದ ಸಿನಿಮಾ ಸಕ್ಸಸ್ ಬಳಿಕ, ರೀಲ್ಸ್, ಅನುಕರಣೆ ಮಾಡಲಾಗುತ್ತಿದೆ. ಆದರೆ, ಹೀಗೆ ಮಾಡಿದರೆ ಭಕ್ತರಿಗೆ ನೋವಾಗುತ್ತದೆ. ಆಚಾರ, ವಿಚಾರಗಳನ್ನು ಒಳಗೊಂದ ಶುದ್ಧ ಪ್ರಕ್ರಿಯೆ ಎಂದು ರಿಷಬ್ ಶೆಟ್ಟಿ ಅವರು ಹೇಳುತ್ತಿದ್ದಾರೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಯಾವುದೋ ಒಂದು ಹಾಡು, ಡೈಲಾಗ್, ಡ್ಯಾನ್ಸ್ ಹಿಟ್ ಆದರೆ ಅದು ಮತ್ತಷ್ಟು ಹಿಟ್ ಆಗುವುದು ರೀಲ್ಸ್ ಹಾಗೂ ಅನುಕರಣೆಯಿಂದ. ಈ ಕಾರಣಕ್ಕೆ ಅದೆಷ್ಟೋ ಸಾಂಗ್ಸ್ ಗಳು ಸೂಪರ್ ಹಿಟ್ ಆಗುತ್ತಿವೆ. ಆದರೆ, ನಟ ರಿಷಬ್ ಶೆಟ್ಟಿ ಹೇಳಿರುವುದಕ್ಕೆ ಅನೇಕರು ವಿರೋಧಿಸಿದ್ದಾರೆ. ನೀವು ಸಿನಿಮಾ ಮಾಡಬಹುದು. ಅದರಿಂದ ಹಣ ಗಳಿಕೆ ಮಾಡಬಹುದು. ಆದರೆ, ಸಾಮಾನ್ಯ ಜನರು ಅದನ್ನು ಮೆಚ್ಚಿ ರೀಲ್ಸ್ ಮಾಡಿದರೆ ತಪ್ಪು ಹೇಗಾಗುತ್ತೆ? ಈ ರೀತಿಯಾಗಿ ಹೇಳುವ ಮೂಲಕ ಧಾರ್ಮಿಕ ಹೆಸರಿನಲ್ಲಿ ಜರನ್ನು ನಿಯಂತ್ರಿಸುವ ಕೆಲಸ ಮಾಡುವುದು ಎಷ್ಟು ಸರಿ ಅನ್ನೋದು ಸೇರಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಮುಂದೆ ಏನಾಗುತ್ತೆ ಅನ್ನೋದು ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!