ಬಿಟೌನ್ ಬ್ಯೂಟಿಗಳ ಜೊತೆ ಧವನ್ ರೊಮ್ಯಾನ್ಸ್

226

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಆಫ್ರಿಕಾ ವಿರುದ್ಧದ ಸರಣಿ ಗೆಲುವಿನ ಖುಷಿಯಲ್ಲಿರುವ ಇಂಡಿಯನ್ ಕ್ರಿಕೆಟ್ ಟೀಂನ ಆಟಗಾರ ಶಿಖರ್ ಧವನ್ ಬಿಟೌನ್ ಬ್ಯೂಟಿಗಳ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ನಟನೆಯ ಮೂಲಕ ರಂಜಿಸಲು ಸಜ್ಜಾಗಿದ್ದಾರೆ.

ಹಿಂದಿಯ ಡಬಲ್ ಎಕ್ಸ್ ಎಲ್ ಅನ್ನೋ ಚಿತ್ರದಲ್ಲಿ ಶಿಖರ್ ಧವನ್ ಕಾಣಿಸಿಕೊಂಡಿದ್ದು, ಈಗಾಗ್ಲೇ ಬಿಡುಗಡೆಯಾಗಿರುವ ಟ್ರೇಲರ್ ನಲ್ಲಿ ಒಮ್ಮೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಎಲ್ಲರಿಗೂ ಕುತೂಹಲ ಮೂಡಿದೆ. ಮಹಿಳೆಯರ ತೂಕದ ಬಗ್ಗೆ ನಿರ್ದೇಶಕ ಸತ್ರಮ್ ರಮಣಿ ಕಥೆ ಹೇಳಲು ಹೊರಟಿದ್ದಾರೆ.

ನಟಿಯಾರದ ಹುಮಾ ಖುರೇಷಿ, ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದಾರೆ. ಇಲ್ಲಿ ಶಿಖರ್ ಧವನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಾ, ಸಿನಿಮಾದ ಪ್ರಮುಖ ಪಾತ್ರವನ್ನೇ ಪ್ಲೇ ಮಾಡುತ್ತಿದ್ದಾರಾ ಅನ್ನೋ ಕುತೂಹಲ ಮಾಡಿದೆ. ರೀಲ್ಸ್ ಮೂಲಕ ಈಗಾಗ್ಲೇ ತಮ್ಮ ನಟನೆ ತೋರಿಸಿರುವ ಧವನ್ ಸಿನ್ಮಾ ದುನಿಯಾಗೆ ಎಂಟ್ರಿ ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!