ಗುಟ್ಕಾ, ಜೂಜು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸ್ಟಾರ್ಸ್ ಮೇಲೆ ಚೇತನ ಗರಂ

317

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಲ್ಲಿ ಇದೀಗ ಬರೀ ಡ್ರಗ್ಸ್ ಬಗ್ಗೆಯೇ ಚರ್ಚೆ. ಎಲ್ಲರ ಕುತೂಹಲ ಈ ಜಾಲದಲ್ಲಿರುವ ನಟ, ನಟಿಯರು ಯಾರು ಅನ್ನೋದು ತಿಳಿದುಕೊಳ್ಳುವುದು. ಈ ನಡುವೆ ನಟ ಚೇತನ ಕೆಲ ಸ್ಟಾರ್ಸ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಟ್ಕಾ, ಮದ್ಯ, ಜೂಜು ಜಾಹೀರಾತುಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವ ಸ್ಟಾರ್ಸ್ ಗಳು ಸಾಮಾಜಿಕ ರಾಯಭಾರಿಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸ್ಟಾರ್ಸ್ ಕಡೆ ಬೆರಳು ತೋರಿಸದೆಯಿರುವುದು ಮೋಸವಲ್ಲವೇ ಎಂದು ಪ್ರಶ್ನಿಸುವ ಮೂಲಕ ಕನ್ನಡದ ಕೆಲ ಸ್ಟಾರ್ಸ್ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!