ಬ್ರೇಕಿಂಗ್ ನ್ಯೂಸ್
Search

ಪೊಲೀಸರಿಗೆ ಹೇಳಬೇಕಾದ ಸತ್ಯ ಇಲ್ಲಿ ಯಾಕೆ?

306

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ಜಾಲ ಬಹುದೊಡ್ಡದಾಗಿದೆ ಎಂದು ಹೇಳ್ತಿರುವ ಉದ್ಯಮಿ, ಸಾಮಾಜಿಕ ಹೋರಾಟಗಾರ ಪ್ರಶಾಂತ ಸಂಬರಗಿ, ಈ ಬಗ್ಗೆ ಯಾರ ಹೆಸರನ್ನೂ ಹೇಳದೆ ಒಗಟಿನ ರೂಪದಲ್ಲಿ ಮಾತ್ನಾಡ್ತಿದ್ದಾರೆ. ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿಯೂ ಈ ಬಗ್ಗೆ ಸುಳಿವು ನೀಡ್ತಿದ್ದಾರೆ. ಇದ್ಯಾಕೆ ಅನ್ನೋ ಪ್ರಶ್ನೆ ಹಲವು ಜನರಲ್ಲಿ ಮೂಡಿದೆ.

ಡ್ರಗ್ಸ್ ಮುಕ್ತ ಭಾರತ ಮಾಡೋಣ ಎಂದಿರುವ ಸಂಬರಗಿ ಅವರು, ಸಿಸಿಬಿ ವಿಚಾರಣೆ ವೇಳೆ ಎಷ್ಟು ಮಾಹಿತಿ ನೀಡಿದ್ದಾರೆ? ಯಾರೆಲ್ಲ ಹೆಸರು ನೀಡಿದ್ದಾರೆ ಗೊತ್ತಿಲ್ಲ. ಆದ್ರೆ, ಹಂತ ಹಂತವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತಿರುವುದು ಯಾಕೆ? ಪೊಲೀಸರಿಗೆ ನೀಡುವ ಮಾಹಿತಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆಯುತ್ತಿರುವುದು ಹಲವು ಅನುಮಾನಗಳನ್ನ ಮೂಡಿಸಿದೆ.

ಇಬ್ಬರು ದೊಡ್ಡ ನಟರ ಸಮೇತ ಇನ್ನಷ್ಟು ಮಾಹಿತಿ ಬಹಿರಂಗ ಪಡಿಸುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸಿಸಿಬಿಗೆ ಇವರು ಮಾಹಿತಿ ನೀಡಿದ್ರೆ, ಆ ಕೆಲಸವನ್ನ ಅವರು ಮಾಡುತ್ತಾರೆ. ಆದ್ರೆ, ಇಲ್ಲಿ ಅದಾಗುತ್ತಿಲ್ಲ. ಸಿಸಿಬಿ ಅಧಿಕಾರಿಗಳಿಗೂ ಮೊದ್ಲೇ ಸಂಬರಗಿ ಅವರು ಕೆಲವೊಂದು ಸುಳಿವು ನೀಡುತ್ತಾ ಹೋಗ್ತಿದ್ದಾರೆ. ಅದು ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗ್ತಿದೆ. ಡ್ರಗ್ಸ್ ದಂಧೆಯ ಬಗ್ಗೆ ಇವರಿಗಿರುವ ಸಂಪೂರ್ಣ ಮಾಹಿತಿಯನ್ನ ಸಿಸಿಬಿಗೆ ನೀಡಿದ್ರೆ, ಮುಂದಿನ ಕೆಲಸ ಅವರಿಗೆ ಸರಳವಾಗಬಹುದಲ್ವಾ? ಸಂಬರಗಿ ಅವರಿಗೆ ಸಿಸಿಬಿ ಮೇಲೆ ನಂಬಿಕೆ ಇಲ್ವೋ..? ಸಂಬರಿಗೆ ಅವರಿಗೆ ಪ್ರಚಾರ ಬೇಕಿದ್ಯಾ? ಸಿಸಿಬಿ ಅವರೆ ಸಂಬರಗಿ ಪೋಸ್ಟ್ ಹಾಕಲಿ ಎಂದು ಕಾಯುತ್ತಿದ್ದಾರೋ ಗೊತ್ತಾಗ್ತಿಲ್ಲ. ಮೀಡಿಯಾಗಳಿಗೆ ದೊಡ್ಡ ಸರಕು ನೀಡ್ತಿರುವುದು ಮಾತ್ರ ಸತ್ಯ.

ನಟ ದಿಗಂತ ಹಾಗೂ ನಟಿ ಐಂದ್ರಿತಾ ದಂಪತಿ ಸಹ ಸಿಸಿಬಿ ವಿಚಾರಣೆ ಎದುರಿಸಿದ್ರು. ಬಳಿಕ ಮೀಡಿಯಾ ಮುಂದೆ ಬಂದ ಅವರು, ಸಿಸಿಬಿ ಅವರ ವಿಚಾರಣೆಗೆ ಸಹಕರಿಸುತ್ತಿದ್ದೇವೆ. ಮತ್ತೆ ಕರೆದರೆ ಬರುತ್ತೇವೆ. ಏನು ಹೇಳಬೇಡಿ ಎಂದಿದ್ದಾರೆ ಎನ್ನುತ್ತಾ ಹೊರಟು ಹೋದರು. ಹಾಗಾದ್ರೆ, ಪ್ರಶಾಂತ ಸಂಬರಗಿ ಅವರಿಗೆ ಸಿಸಿಬಿ ಹೊರಗಡೆ ಏನು ಹೇಳಬೇಡಿ ಎಂದು ಹೇಳಿಲ್ವಾ? ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಮಾತ್ನಾಡಲು ಹೇಳಿದ್ದಾರಾ? ಸಾರ್ವಜನಿಕರ ಇಂಥಾ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.




Leave a Reply

Your email address will not be published. Required fields are marked *

error: Content is protected !!