ನೇತ್ರ ದಾನ ಮಾಡಿದ ಅಭಿನಯ ಶಾರದೆ

274

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಸೋಮವಾರ ಬೆಳಗ್ಗೆ ನಿಧನರಾದ 76 ವರ್ಷದ ಹಿರಿಯ ನಟಿ ಜಯಂತಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯದ ಡಾ.ರಾಜಕುಮಾರ ಐ ಬ್ಯಾಂಕ್ ಗೆ ಕಣ್ಣುಗಳನ್ನು ನೀಡಲಾಗಿದೆ. ಈ ಮೂಲಕ ಸಾವಿನಲ್ಲೂ ಸಾರ್ಥಕ ಮೆರೆಯಲಾಗಿದೆ.

ಇವರ ಕಣ್ಣುಗಳನ್ನ ಬಾಲಕನೊಬ್ಬನಿಗೆ ನೀಡಲಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಬನಶಂಕರಿಯ ಚಿತಾಗಾರದಲ್ಲಿ ಹಿರಿಯ ನಟಿಯ ಅಂತಿಮ ಸಂಸ್ಕಾರ ನೆರವೇರಿದೆ. ಬಳ್ಳಾರಿ ಮೂಲದ ನಟಿ ಜಯಂತಿಯ ಮೂಲ ಹೆಸರು ಕಮಲಾಕುಮಾರಿ. 1945ರಲ್ಲಿ ಜನಸಿದರು. ಜೇನುಗೂಡು ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ, 6 ಭಾಷೆಗಳ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!