ಪರಿಸರವಾದಿ ಬದ್ದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

2197

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹುಬ್ಬಳ್ಳಿಯ ನಿವಾಸಿ ಹಾಗೂ ಪರಿಸರವಾದಿ ಮಂಜುನಾಥ್ ಬದ್ದಿ ಎಂಬುವರ ವಿರುದ್ಧ ದಾಂಡೇಲಿಯ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ, ರಾಜ್ಯ ಅರಣ್ಯ ಸಚಿವರ ಕಾರ್ಯಾಲಯದ ವಿಶೇಷ ಕರ್ತವ್ಯ ಅಧಿಕಾರಿ ಪ್ರಸನ್ನ ಸುಬೇದಾರ ಎಂಬುವವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ 2014-15 ರಿಂದ ವಲಯ ಅರಣ್ಯ ಅಧಿಕಾರಿಯಾಗಿ ಪ್ರಸನ್ನ ಸುಬೇದಾರ ಸೇವೆ ಸಲ್ಲಿಸಿದ್ದಾರೆ. ಸದ್ಯ ಅರಣ್ಯ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರು ಹೇಳುವುದು ಏನೆಂದರೆ, ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಕುಳಗಿ ವಲಯ ಹಾಗೂ ಹಳಿಯಾಳ ವಲಯದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ನಂತರ ತಿನೈಗಾಟ ವಲಯದಲ್ಲಿ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುವಾಗ ಹುಬ್ಬಳ್ಳಿ ಮೂಲದ ಪರಿಸರವಾದಿ ಎಂಬ ಮಂಜುನಾಥ ಬದ್ದಿ ಅವರು ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡಿ, ಮಾನನಷ್ಟ ಮಾಡಿದ್ದಾರೆ. ಅನೇಕ ವಿಧದ ಅವರ ಹೆದರಿಕೆಗೆ ನಾನು ಮಣಿಯದ ಕಾರಣಕ್ಕೆ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಆರೋಪ ನಿರಾಧಾರವಾಗಿದ್ದು, ಅವರ ಸುಳ್ಳು ಹೇಳಿಕೆಗೆ ಅರಣ್ಯ ಇಲಾಖೆಯ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಕಿವಿಗೊಡಬಾರದು. ಈ ಕುರಿತು ಪರಿಸರವಾದಿ ಮಂಜುನಾಥ ಬದ್ದಿ ಎಂಬುವರ ವಿರುದ್ಧ ದಾಂಡೇಲಿಯ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಿಸಿದ್ದೇವೆ ಎಂದು ಅರಣ್ಯ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾದ ಪ್ರಸನ್ ಸುಬೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

”ಅರಣ್ಯ ಇಲಾಖೆ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾದ ಪ್ರಸನ್ನ ಸುಬೇದಾರ ಪರವಾಗಿ ವಕಾಲತ್ತು ವಹಿಸಲಾಗಿದೆ. ಈಗಾಗಲೇ ಹುಬ್ಬಳ್ಳಿಯ ಪರಿಸರವಾದಿ ಮಂಜುನಾಥ ಬದ್ದಿಯವರ ಮೇಲೆ ಮಾನನಷ್ಟ ಮೊಕದ್ದಮೆ ಸಹ  ದಾಖಲಿಸಲಾಗಿದೆ.”

ಸುರೇಂದ್ರ ಉಗಾರೆ, ಪ್ರಸನ್ನ ಸುಬೇದಾರ ಪರ ವಕೀಲರು
ಪ್ರಸನ್ನ ಸುಬೇದಾರ್

ಇನ್ನು ಈ ಪ್ರಕರಣ ಸಂಬಂಧ ಪರಿಸರವಾದಿ ಮಂಜುನಾಥ್ ಬದ್ದಿ ಅವರ ಪ್ರತಿಕ್ರಿಯೆ ಪಡೆಯುವ ಸಂಬಂಧ ನಮ್ಮ ಪ್ರತಿನಿಧಿ ಹಲವು ಬಾರಿ ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಿಜಕ್ಕೂ ಇಲ್ಲಿ ನಡೆದಿರುವುದು ಏನು ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಬಹುದು.




Leave a Reply

Your email address will not be published. Required fields are marked *

error: Content is protected !!