ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಮತ್ತೆ ಕಿಡಿ

51

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಕುಂದಾನಗರಿಯ ರಾಜಕೀಯದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಜಿದ್ದಾಜಿದ್ದಿ ಮುಂದುವರೆದಿದೆ. ಈ ಸಂಘರ್ಷದ ಮೂಲ ಏನು ಅನ್ನೋದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಆದರೆ, ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಾ ಕತ್ತಿ ಮಸಿಯುತ್ತಿದ್ದಾರೆ.

ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಸಂಬಂಧ ಜಾರಕಿಹೊಳಿ, ಶಾಸಕಿ ಹೆಬ್ಬಾಳ್ಕರ್ ವಿರುದ್ಧ ಕಿಡಿ ಕಾರಿದ್ದು ಆ ಹಣ್ಣುಮಗಳದ್ದು ರೂಪ ಅಷ್ಟೇ ಗುಣಗಳಲ್ಲ. ದೇಶದ ಇತಿಹಾಸದಲ್ಲಿಯೇ ಸಿಎಂ ಉದ್ಘಾಟಿಸಿದ ಬಳಿಕ 2ನೇ ಬಾರಿಗೆ ಲೋಕಾರ್ಪಣೆಗೊಳಿಸಿದ್ದು ಎಂದರು.

ನಾವು ಹೆಣ್ಣುಮಕ್ಕಳು, ನಿಮ್ಮ ಮನೆ ಮಗಳು, ಸೊಸೆ ಎಂದು ಹೇಳಿಕೊಂಡು ಬರುತ್ತಾರೆ. ಅವರನ್ನು ನಂಬಬೇಡಿ. ಗ್ರಾಮೀಣ ಕ್ಷೇತ್ರದಲ್ಲಿ ನನ್ನ ಹೆಸರಿನ ಲೆಟರ್ ಹೆಡ್ ಮೇಲೆ ಕೆಲಸ ನಡೆದಿವೆ. ಆದರೆ, ಶಾಸಕಿ ತಾನೇ ಮಾಡಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಾರೆ ಅಂತಾ ವಾಗ್ದಾಳಿ ನಡೆಸಿದರು. ಈ ಮೊದಲು ಒಂದೇ ಪಕ್ಷದಲ್ಲಿ ಇವರು ಅಣ್ಣ ತಂಗಿಯಂತೆ ಇದ್ದರು. ಈಗ ಹಾವು ಮುಂಗೂಸಿಯಂತೆ ಕಚ್ಚಾಡುತ್ತಿದ್ದು, ಶತಾಯಗತಾಯ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ ಜಾರಕಿಹೊಳಿ ಸಜ್ಜಾಗಿದ್ದಾರೆ. ಎಲ್ಲದಕ್ಕೂ ಕಾಲ ಉತ್ತರಿಸಲಿದೆ.
Leave a Reply

Your email address will not be published. Required fields are marked *

error: Content is protected !!