ಇಂದಿನಿಂದ 2 ಸಾವಿರ ನೋಟು ಬದಲಾವಣೆಗೆ ಅವಕಾಶ

134

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2000 ರೂಪಾಯಿ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ. ಹೀಗಾಗಿ ಇನ್ಮುಂದೆ ಸಾರ್ವಜನಿಕರು 2 ಸಾವಿರ ರೂಪಾಯಿ ನೋಟು ಬಳಕೆ ಮಾಡುವಂತಿಲ್ಲ. ಆದ್ದರಿಂದ ತಮ್ಮ ಬಳಿಯಿರುವ 2 ಸಾವಿರ ರೂಪಾಯಿ ನೋಟನ್ನು ಬ್ಯಾಂಕಿನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಮೇ 23ರಿಂದ ಬ್ಯಾಂಕಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಳೆದ ಶುಕ್ರವಾರ ಆರ್ ಬಿಐ 2000 ರೂಪಾಯಿ ನೋಟಿನ ವ್ಯವಹಾರ ನಿಲ್ಲಿಸುವಂತೆ ಹೇಳಿದೆ. ಈಗ ಸಾರ್ವಜನಿಕರು ಯಾವುದೇ ಬ್ಯಾಂಕಿನಲ್ಲಿ 2 ಸಾವಿರ ರೂಪಾಯಿ ನೋಟು ನೀಡಿ ಬದಲಿ ನೋಟು ಪಡೆಯಬಹುದು. ಇದು ಸೆಪ್ಟೆಂಬರ 10ರ ತನಕ ಜಾರಿಯಲ್ಲಿರಲಿದೆ.

ಆರ್ ಬಿಐ ಕಾಯ್ದೆ 1934 ಸೆಕ್ಷನ್ 24(1)ರ ಅನ್ವಯ 2016ರಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಪರಿಚಯಿಸಲಾಯಿತು. ಮುಂದೆ 2018-2019ರಲ್ಲಿ ಮುದ್ರಣ ನಿಲ್ಲಿಸಲಾಯಿತು. ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗುತ್ತಿದೆ. ಏಕಕಾಲದಲ್ಲಿ 20 ಸಾವಿರ ರೂಪಾಯಿ ಮಾತ್ರ ಬದಲಾವಣೆ ಮಾಡಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!