ಕುಟುಂಬಸ್ಥರನ್ನೇ ಚಾಕುವಿನಿಂದ ಇರಿದು ಕೊಂದ ಯುವಕ

72

ಪ್ರಜಾಸ್ತ್ರ ಅಪರಾಧ ಸುದ್ದಿ

ನವದೆಹಲಿ: ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದಲ್ಲಿ ಬುಧವಾರ ಭೀಕರ ಘಟನೆಯೊಂದು ನಡೆದಿದೆ. ಕುಟುಂಬದ ನಾಲ್ವರನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದೆ.

ಮಾದಕ ವ್ಯಸನಿಯಾಗಿದ್ದ ಯುವಕನನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಅಲ್ಲಿಂದ ವಾಪಸ್ ಆದ ಕೆಲ ದಿನಗಳಲ್ಲೇ ಆರೋಪಿ ಕೇಶವ್(25) ತನ್ನ ಕುಟುಂಬಸ್ಥರನ್ನೇ ಬುಧವಾರ ಹತ್ಯೆ ಮಾಡಿದ್ದಾನೆ. ಅಜ್ಜಿ ದೀವಾನಾದೇವಿ(75), ತಂದೆ ದಿನೇಶ್(50), ತಾಯಿ ದರ್ಶನಾ ಹಾಗೂ ಸಹೋದರಿ ಊರ್ವಶಿ(18) ಕೊಲೆಯಾದ ದುರ್ದೈವಿಗಳು.

ಅಫ್ತಾಬ್ ನಿಂದ ಶ್ರದ್ಧಾ ಅನ್ನೋ ಯುವತಿ ಭೀಕರವಾಗಿ ಹತ್ಯೆಯಾದ ಘಟನೆಯ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಮತ್ತೊಂದು ಭಯಾನಕ ಘಟನೆ ಸಂಭವಿಸಿದೆ. ದೆಹಲಿಯಲ್ಲಿ ಪದೆಪದೆ ನಡೆಯುತ್ತಿರುವ ಹತ್ಯೆಗಳು ದೇಶವನ್ನೇ ಬೆಚ್ಚಿ ಬೀಳಿಸುತ್ತಿವೆ.
Leave a Reply

Your email address will not be published. Required fields are marked *

error: Content is protected !!