ಬಿಜೆಪಿಯಲ್ಲೂ ಸಿಎಂ ಪಟ್ಟಕ್ಕಾಗಿ ಫೈಟ್!

216

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪ್ರತಿಯೊಂದು ಪಕ್ಷಗಳು ತಮ್ಮ ಮತಗಳನ್ನು ಭದ್ರಪಡಿಸಿಕೊಳ್ಳಲು ಎಲ್ಲ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದರ ಜೊತೆಗೆ ರಾಜಕೀಯ ಪಕ್ಷಗಳಲ್ಲಿ ಮುಂದಿನ ಸಿಎಂ ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ.

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ ಸೇರಿ ಅನೇಕರ ನಡುವೆ ಫೈಟ್ ಇದೆ ಎನ್ನಲಾಗುತ್ತಿದೆ. ಇದೆ ರೀತಿ ಬಿಜೆಪಿಯಲ್ಲೂ ಮುಖ್ಯಮಂತ್ರಿ ಪಟ್ಟಕ್ಕಾಗಿ ಒಳಗೊಳಗೆ ಸಂಘರ್ಷ ಶುರುವಾಗಿದೆಯಂತೆ. ಯಾಕಂದರೆ, ಬಾಗಲಕೋಟೆಯ ಮುಧೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಮುಂದಿನ ಸಾರಿಯೂ ನಾನೇ ಸಿಎಂ. ಚಿಂತೆ ಮಾಡಬೇಡಿ ಎನ್ನುವ ಮೂಲಕ ಯಾರಿಗೆ ಹೇಳಬೇಕು ಅವರಿಗೆ ಹೇಳಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.

ಹೌದು, ಬಿಜೆಪಿಯಲ್ಲಿ ಸಿಎಂ ಆಗಲು ಮುರುಗೇಶ್ ನಿರಾಣಿ, ಆರ್.ಅಶೋಕ್ ಸೇರಿ ಅನೇಕ ನಾಯಕರ ಕಸರತ್ತು ನಡೆಸಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ಮಾತು ಪರೋಕ್ಷವಾಗಿ ಇವರಿಗೆಲ್ಲ ಟಾಂಗ್ ಕೊಟ್ಟಿದ್ದಾರೆ ಅನ್ನೋದು ರಾಜಕೀಯ ಬಲ್ಲವರ ಮಾತು. ಆದರೆ, ಬಿಜೆಪಿ ಹೈಕಮಾಂಡ್ ಯಾರ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೆ ಎಂಬುವುದು ಮುಖ್ಯವಾಗಿದೆ. ಮತ್ತೆ ಪ್ರಧಾನಿ ಮೋದಿ ಫೇಸ್ ಮುಂದೆ ತಂದರೆ ರಾಜ್ಯ ನಾಯಕರಿಗೆ ಇಲ್ಲಿ ಬೆಲೆ ಇಲ್ಲ ಎಂದಾಗುತ್ತೆ. ಹೀಗಾಗಿ ಈ ವಿಚಾರದಲ್ಲಿ ರಾಜ್ಯದ ಜನತೆಯಲ್ಲಿ ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!