ಅರ್ಧ ಹೆಲ್ಮೆಟ್ ಧರಿಸಿದರೆ ಭಾರೀ ದಂಡ

151

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದ ಬಹುತೇಕ ಕಡೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಆದರೂ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸುವುದಿಲ್ಲ. ಇನ್ನು ಕೆಲವರು ಅರ್ಧ ಹೆಲ್ಮೆಟ್ ಧರಿಸುತ್ತಾರೆ. ಇನ್ನು ಮುಂದೆ ಸಿಲಿಕಾನ್ ಸಿಟಿಯಲ್ಲಿ ಅರ್ಧ ಹೆಲ್ಮೆಟ್ ಧರಿಸುವಂತಿಲ್ಲ.

ಬೆಂಗಳೂರು ಸಂಚಾರಿ ಪೊಲೀಸರು, ಅರ್ಧ ಹೆಲ್ಮಟ್ ನ್ನು ಹೆಲ್ಮೆಟ್ ರಹಿತ ಚಾಲನೆ ಎಂದು ಪರಿಗಣಿಸಿದ್ದಾರೆ. ಹೀಗಾಗಿ 500 ರೂಪಾಯಿ ತನಕ ದಂಡ ವಿಧಿಸಲಾಗುತ್ತೆ. ಮೋಟಾರ ವಾಹನ ನಿಯಮಗಳ 1989 ನಿಯಮ 230(1)ಕ್ಕೆ ತಿದ್ದುಪಡಿ ತಂದು, ರಾಜ್ಯವ್ಯಾಪಿ ಬೈಕ್ ಸವಾರರು ಪೂರ್ತಿ ಇರುವ ಹೆಲ್ಮೆಟ್ ಧರಿಸಬೇಕು. ಇಲ್ಲದೆ ಹೋದರೆ 500 ರೂಪಾಯಿ ದಂಡ ವಿಧಿಸಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!