ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮುಂಬೈ: ಇಲ್ಲಿನ ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ಹಾಕಲಾಗಿರುವ ಬಿಗ್ ಬಾಸ್ ಸೆಟ್ ನಲ್ಲಿ ಭಾನುವಾರ ಬೆಂಕಿ ಅನಾಹುತ ಸಂಭವಿಸಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿವೆ. ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ.
ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಅದರ ತನಿಖೆ ನಡೆಸಲಾಗುತ್ತಿದೆ. ಜನವರಿ 30ರಂದು ಬಿಗ್ ಬಾಸ್ ಸೀಸನ್ 15 ಮುಕ್ತಾಯವಾಗಿದೆ. ತೇಜಸ್ವಿ ಪ್ರಕಾಶ್ ಈ ಬಾರಿಯ ವಿನ್ನರ್ ಆಗಿದ್ದಾರೆ.