ಚಿಕ್ಕಮಗಳೂರಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ

75

ಪ್ರಜಾಸ್ತ್ರ ಅಪರಾಧ ಸುದ್ದಿ

ಚಿಕ್ಕಮಗಳೂರು: ರಾಜ್ಯದಿಂದ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ನಿತ್ಯ ಒಂದಲ್ಲ ಒಂದು ಕಡೆ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇಂದು ಕಾಫಿನಾಡಿನಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಲಾಗಿದ್ದು, ಅಮಾಯಕರಿಬ್ಬರು ಬಲಿಯಾಗಿದ್ದಾರೆ.

ತಾಲೂಕಿನ ಬಿದುರೆ-ಚಂದುವಳ್ಳಿ ಹತ್ತಿರ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಹೊರಟಿದ್ದ ಪ್ರಕಾಶ್(30) ಹಾಗೂ ಪ್ರವೀಣ್(33) ಕೊಲೆಯಾದ ದುರ್ದೈವಿಗಳು. ರಮೇಶ್ ಅನ್ನೋ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರ ಜೀವ ಹೋಗಿದೆ. ಬಾಳೆಹೊನ್ನೂರು ಪೊಲೀಸರು ರಮೇಶನನ್ನು ವಶಕ್ಕೆ ಪಡೆದಿದ್ದು, ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ.

ಈ ರಮೇಶ್ ಕೈಗೆ ಗನ್ ಎಲ್ಲಿಂದ ಬಂತು, ಯಾರು ಕೊಟ್ಟರು, ಇದಕ್ಕೆ ಪರವಾನಿಗೆ ಇದ್ಯಾ ಏನು ಅನ್ನೋದರ ಕುರಿತು ತನಿಖೆ ನಡೆಯುತ್ತಿದೆ. ಈ ಭಾಗದಲ್ಲಿ ಪ್ರಾಣಿಗಳ ಹಾವಳಿಯಿಂದ ಜೀವರಕ್ಷಣೆಗಾಗಿ ಪರವಾನಿಗೆ ಪಡೆದು ಗನ್ ಪಡೆದುಕೊಂಡಿರುತ್ತಾರೆ. ಆದರೆ, ಈ ಘಟನೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
Leave a Reply

Your email address will not be published. Required fields are marked *

error: Content is protected !!