ಜಾನಪದ ಗಾಯಕಿ ಲಕ್ಷ್ಮೀದೇವಮ್ಮಗೆ ಕೇಂದ್ರ ಪ್ರಶಸ್ತಿಯ ಗರಿ

222

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕೊಡಮಾಡುವ ಸಂಗೀತ ನಾಟಕ ಪ್ರಶಸ್ತಿಗೆ ಜಾನಪದ ಗಾಯಕಿ ಎಸ್.ಜಿ ಲಕ್ಷ್ಮೀದೇವಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಕೇಂದ್ರ ಸರ್ಕಾರಿ ಪ್ರಶಸ್ತಿ ಪುರಸ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ದೇಶ್ಯಾದ್ಯಂತ 128 ಸಾಧಕರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ 7 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ ಎಚ್.ಜಿ ಲಕ್ಷ್ಮೀದೇವಮ್ಮ ಒಬ್ಬರು. 1 ಲಕ್ಷ ರೂಪಾಯಿ ನಗದು, ತಾಮ್ರಪತ್ರ ಹಾಗೂ ಅಂಗವಸ್ತ್ರವನ್ನು ಪ್ರಶಸ್ತಿ ಒಳಗೊಂಡಿರುತ್ತದೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಇವರ ಈ ಸಾಧನೆಗೆ ಎಲ್ಲಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.

ರೈತ ಹೆಣ್ಮಗಳು ಜಾನಪದ ಗಾಯಕಿಯಾಗಿ ಸಾಧಿಸಿದ್ದು..

ನೆಲಮೂಲದ ಸಾಹಿತ್ಯದಲ್ಲಿ ಜಾನಪದ ಸಾಹಿತ್ಯಕ್ಕೆ ಅಗ್ರಗಣ್ಯ ಸ್ಥಾನವಿದೆ. ಇದು ಇಂದಿಗೂ ಜೀವಂತವಾಗಿರುವುದೇ ನಮ್ಮ ಗ್ರಾಮ್ಯ ಪ್ರದೇಶದ ಹೆಣ್ಮಕ್ಕಳಿಂದ. ಹೀಗಾಗಿ ಈ ಕ್ಷೇತ್ರದಲ್ಲಿರುವ ಅನೇಕ ಸಾಧಕರು ಎಲೆಮರೆ ಕಾಯಿಯಂತೆ ಉಳಿದುಕೊಳ್ಳುತ್ತಾರೆ. ಕೆಲವರು ಕಷ್ಟುಪಟ್ಟು ಸಾಧಿಸಿ ತೋರಿಸುತ್ತಾರೆ. ಅದರಲ್ಲು ಮುಗಳಿ ಲಕ್ಷ್ಮೀದೇವಮ್ಮ ಒಬ್ಬರು. ರೈತ ಹೆಣ್ಮಗಳು ತಮ್ಮಲ್ಲಿರುವ ಜಾನಪದ ಕಲೆಯಿಂದಾಗಿ ಇಂದು ರಾಷ್ಟ್ರಮಟ್ಟದಲ್ಲಿ ಗುರಿತಿಸುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ.

ತಮಗೆ ಸಂದ ಪ್ರಶಸ್ತಿಗಳೊಂದಿಗೆ ಜಾನಪದ ಗಾಯಕಿ ಲಕ್ಷ್ಮೀದೇವಮ್ಮ

ಸೋಬಾನೆ ಪದಗಳು, ಸುಗ್ಗಿಯ ಪದಗಳು, ಭಕ್ತಿಗೀತೆಗಳಂತೆ ಜಾನಪದ ಗೀತೆಗಳು ಹಳ್ಳಿ ಹೆಣ್ಮಕ್ಕಳಿಗೆ ಹಿರಿಯರಿಂದ ಸಿಗುವ ಅತ್ಯಂತ ಶ್ರೇಷ್ಠ ಬಳುವಳಿ. ಅದನ್ನು ಪಡೆದು ತಮ್ಮ ಕಂಠಸಿರಿಯ ಮೂಲಕ ಎಲ್ಲರನ್ನು ರಂಜಿಸಿ ಮನೆ ಮಾತಾದವರು. ಎಚ್.ಜಿ ಲಕ್ಷ್ಮೀದೇವಮ್ಮನವರು. ಇವರಿಂದ ಅನೇಕರು ಸ್ಪೂರ್ತಿ ಪಡೆದು ಜಾನಪದ ಗಾಯಕರಾಗುತ್ತಿದ್ದಾರೆ. ಈ ಮೂಲಕ ನಮ್ಮ ಸೊಗಡನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಇವರ ಪಾತ್ರ ಬಹುದೊಡ್ಡದಿದೆ.

ಮನೆ, ಸಂಸಾರದ ಬಂಡಿಯನ್ನು ಸಾಗಿಸುವ ಜೊತೆಗೆ ಕಲೆಯನ್ನು ಮೈಗೂಡಿಸಿಕೊಂಡು ಜಿಲ್ಲೆ ಮಾತ್ರವಲ್ಲ ರಾಜ್ಯದ ತುಂಬಾ ಸುತ್ತಾಡಿ ಹಾಡಿ ರಂಜಿಸಿದರು. ಹೆಳ್ಳಿಯ ಹೆಣ್ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲವೆಂದು ತೋರಿಸಿದರು. ಇವರ ಸಾಧನೆ ಕಂಡು ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದವು. ಕೇಂದ್ರ ಸರ್ಕಾರದಿಂದ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಅಲ್ಲದೆ ಕಡೂರಿನಲ್ಲಿ ನಡೆಯುತ್ತಿರುವ ಜಿಲ್ಲಾ ಜಾನಪದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಇಂದಿನ ಯುವತಿಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

ಲೇಖಕರು: ರಂಜಿತ ಎಸ್.ಆರ್Leave a Reply

Your email address will not be published. Required fields are marked *

error: Content is protected !!