ಪಾಂಡವಪುರದಲ್ಲಿ ವಲಸಿಗರಿಗೆ ಹಾಲು ವಿತರಣೆ

282

ಪಾಂಡವಪುರ: ತಾಲೂಕಿನ ಎಲೆಕೆರೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಸುಮಾರು 100ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳಿಗೆ ಪ್ರಗತಿ ಸೇವಾ ಟ್ರಸ್ಟ್‌ ನಿಂದ ಉಚಿತವಾಗಿ ಹಾಲು ವಿತರಿಸಲಾಯಿತು.

ಇಂದು ಬೆಳಗ್ಗೆ ಟ್ರಸ್ಟ್ ಅಧ್ಯಕ್ಷ ರಾಗೀಮುದ್ದನಹಳ್ಳಿ ಡಾ.ನಾಗೇಶ ಹಾಲು ವಿತರಣೆ ಮಾಡಿದ್ರು. ಈ ವೇಳೆ ಮಾತ್ನಾಡಿದ ಅವರು, ಲಾಕ್‌ ಡೌನ್‌ ನಿಂದಾಗಿ ವಲಸೆ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಕೂಲಿ ಕೆಲಸ ನಂಬಿ ದೂರದ ತಮಿಳುನಾಡಿನಿಂದ ನೂರಾರು ಬಂದಿದ್ದಾರೆ. ಆದರೆ, ಇಲ್ಲಿ ಕೃಷಿ ಚಟುವಟಿಕೆಗಳು sಸ್ಥಗಿತಗೊಂಡಿರುವ ಕಾರಣ ಜನರಿಗೆ ಕೂಲಿ ಕೆಲಸ ಸಿಗುತ್ತಿಲ್ಲ. ವೃದ್ಧರು, ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿದ್ದು, ಇದನ್ನ ನೀಗಿಸಲು ಪ್ರಗತಿ ಸೇವಾ ಟ್ರಸ್ಟ್‌ನಿಂದ ಮಕ್ಕಳು ಮತ್ತು ವೃದ್ಧರಿಗೆ ಹಾಲು ವಿತರಿಸಲಾಗಿದೆ ಎಂದರು.

ಇನ್ನು ಈ ವೇಳೆ ಸಾಮಾಜಿಕ ಅಂತರ ಬಗ್ಗೆ ಗಮನ ಹರಿಸದೆ ಇರೋದು ಕಂಡು ಬಂತು. ಸೋಷಿಯಲ್ ಡಿಸ್ಟಂನ್ಸ್ ತುಂಬಾ ಮುಖ್ಯವಾಗಿದೆ. ಹಾಲು ವಿತರಣೆಗೆ ಆದಿತ್ಯ, ಎಂ.ಎಚ್ ವಿಜಯಕುಮಾರ, ಚಿಟ್ಟನಹಳ್ಳಿ ಮಂಜು ಸೇರಿದಂತೆ ಹಲವರು ಸಾಥ್ ನೀಡಿದ್ರು.




Leave a Reply

Your email address will not be published. Required fields are marked *

error: Content is protected !!