ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ ಮೋದಿ

231

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಗುರುವಾರ ಸಂಜೆ ದೇಶವನ್ನುದ್ದೇಶಿಸಿ ಮಾತ್ನಾಡಿದ ಅವರು, ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ಹಾಕಲಾಗುವುದು ಎಂದಿದ್ದಾರೆ.

ರಾಜ್ಯಗಳಿಗೆ ಕೇಂದ್ರದಿಂದ ಉಚಿತವಾಗಿ ಲಸಿಕೆ ಪೂರೈಕೆ ಮಾಡಲಾಗುವುದು. ಇದಕ್ಕೆ ಹಣ ನೀಡಬೇಕಾಗಿಲ್ಲ. ಇನ್ನು ಖಾಸಗಿ ಆಸ್ಪತ್ರೆಗಳಿಗೆ ಶೇಕಡ 25ರಷ್ಟು ಲಸಿಕೆ ನೀಡಲಾಗುವುದು. ಅಲ್ಲಿ ಪ್ರತಿ ಡೋಸ್ ಗೆ 150 ರೂಪಾಯಿ ಮಾತ್ರ ಪಡೆಯಬೇಕು ಎಂದು ತಿಳಿಸಿದ್ದಾರೆ.

3ನೇ ಹಂತದಲ್ಲಿ ಮಕ್ಕಳಿಗೆ ಕೋವಿಡ್ ನಿಂದ ಸಮಸ್ಯೆಯಾಗುತ್ತೆ ಅನ್ನೋದರ ಕುರಿತು ಜನರು ಆತಂಕ ಪಡಬಾರದು. ಅದಕ್ಕಾಗಿ ಲಸಿಕೆ ಸಿದ್ಧತೆ ನಡೆಯುತ್ತಿದೆ. ಇದು ಪ್ರಯೋಗದ ಹಂತದಲ್ಲಿದೆ. ಇದು ಮುಗಿದರೆ ಲಸಿಕೆ ಅಭಿಯಾನಕ್ಕೆ ವೇಗ ಸಿಗಲಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!