ಒಲಿಂಪಿಕ್ಸ್ 2020: ಪದಕ ವಂಚಿತಳಾದ ಬೆಂಗಳೂರಿನ ಗಾಲ್ಫ್ ಆಟಗಾರ್ತಿ

239

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ: ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ಬೆಂಗಳೂರು ಮೂಲದ ಗಾಲ್ಫ್ ಆಟಗಾರ್ತಿ ಅಧಿತಿ ಅಶೋಕ, ಪದಕ ತರುವ ಭರವಸೆ ಮೂಡಿಸಿದ್ದರು. ಆದ್ರೆ, ಇಂದು ನಡೆದ ಫೈನಲ್ ನಲ್ಲಿ 4ನೇ ಸ್ಥಾನ ಪಡೆದರು.

ನಾಲ್ಕೇ ಸ್ಥಾನ ಪಡೆದರೂ ಭಾರತದ ಆಟಗಾರ್ತಿಯ ಈ ಸಾಧನೆ ಶ್ರೇಷ್ಠವಾಗಿದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ. ಆದ್ರೆ, ಆಟಗಾರ್ತಿ ಅಧಿತಿ ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲ ಮೂರು ಸುತ್ತಿನಲ್ಲಿ 2ನೇ ಸ್ಥಾನದಲ್ಲಿದ್ದರು. ಆದ್ರೆ, 4ನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿದೆ.




Leave a Reply

Your email address will not be published. Required fields are marked *

error: Content is protected !!