ಚಂದನವನದಲ್ಲಿ ಮತ್ತೊಂದು ಸ್ಟಾರ್ ಜೋಡಿ ಎಂಗೇಜ್

277

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ನಡುವೆ ಲವ್ವಿಡವ್ವಿ ನಡೆದಿದೆ. ಶೀಘ್ರದಲ್ಲಿ ಮದುವೆಯಾಗುತ್ತಾರೆ ಅನ್ನೋ ಸುದ್ದಿ ಹರಿದಾಡಿತು. ಇದೀಗ ಜೋಡಿ ಅದನ್ನು ಒಪ್ಪಿಕೊಂಡಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದೆ. ಈ ಮೂಲಕ ಚಂದನವನದಲ್ಲಿ ಮತ್ತೊಂದು ಸ್ಟಾರ್ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗಿದೆ.

ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೇ ತುಂಬಾ ದಿನಗಳಿಂದ ಇವರಿಬ್ಬರ ನಡುವೆ ಪ್ರೇಮ ಕಹಾನಿ ಇತ್ತು ಅನ್ನೋದು ಬಹುತೇಕರಿಗೆ ಗೊತ್ತಿರಲಿಲ್ಲ. ಕಳೆದೊಂದು ವಾರದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿ ಮದುವೆಯಾಗಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!