ಬ್ರೇಕಿಂಗ್ ನ್ಯೂಸ್
Search

ಹತ್ರಾಸ್ ಪ್ರಕರಣ: ಮೋದಿ ವಿರುದ್ಧ ಡಿಕೆ ಕಿಡಿ

266

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ, ಆ ಬಾಲಕಿ ಕುಟುಂಬಕ್ಕೆ ಶವ ಕೊಟ್ಟಿಲ್ಲ. ಇದನ್ನು ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದರೇ ಅವರನ್ನು ಬಂಧಿಸುತ್ತಾರೆ. ಇದು ನಮ್ಮ ದೇಶಕ್ಕೆ ಮತ್ತು ಪ್ರಧಾನಿ ಮೋದಿಗೆ ಶೋಭೆ ತರುತ್ತದೇಯಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯ ಪ್ರಜಾ ವಿರೋಧಿ ದುರಾಡಳಿತ ಅಂತ್ಯವಾಗಬೇಕಾದರೇ ಪ್ರತಿಯೊಬ್ಬರು ಕಾಂಗ್ರೆಸ್ ಸದಸ್ಯರಾಗಬೇಕು ಎಂದರು.

ನೀವು ಮುಂದಿನ ಡಿ.ಕೆ‌ ಶಿವಕುಮಾರ ಆಗಬೇಕು. ನಾನೇನು ಇಲ್ಲಿಯೇ ತಳ ಊರಿಕೊಂಡು ಕುಳಿತುಕೊಳ್ಳಲು ಬಂದಿಲ್ಲ. ನಮ್ಮ ಅಧಿಕಾರವನ್ನು ವಿಧಾನಸೌಧ, ಜಿಲ್ಲಾ ಪಂಚಾಯತ, ಕಾರ್ಪೋರೇಷನ್ ನಲ್ಲಿ ಇಟ್ಟುಕೊಳ್ಳೋಣ. ಸ್ಟೇಜ್ ಮೇಲೆ‌ ಇದ್ದೋರೆಲ್ಲ ನಾಯಕರಾಗೊಲ್ಲ, ನಾವು ಜನರ ಮಧ್ಯೆ ಇರೋಣ.

ಒಂದು ಕಾಲದಲ್ಲಿ ಇಂಧಿರಾ ಗಾಂಧಿ‌ ಹೆಸರು ಹೇಳಿದರೇ ವೋಟ್ ಸಿಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ, ಬಹಳ ಭಾಗಗಳಾಗಿದೆ. ಪಕ್ಷ ಬಿಟ್ಟು ಹೋದವರಿಂದ ಬಹಳ ಬದಲಾವಣೆ ಆಗಿದೆ.ಈ ದೇಶ ಉಳಿಯಬೇಕಾದರೆ ಮಹಿಳೆಯರು, ವಿದ್ಯಾರ್ಥಿಗಳಿಂದ ಸಾಧ್ಯ ಎಂದರು. ಈ ವೇಳೆ ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಕಾಂಗ್ರೆಸ್ ಮುಖಂಡ ಅನೀಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ ಸೇರಿ ಅನೇಕರಿದ್ದರು.




Leave a Reply

Your email address will not be published. Required fields are marked *

error: Content is protected !!