ಬೆಂಗಳೂರಲ್ಲಿ ಮಾಲ್ ನಿರ್ಮಿಸಲು ಡಿಕೆಶಿ ಸಿಎಂ ಮಾಡಲು ಮನವಿ: ಹೆಚ್ಡಿಕೆ

51

ಪ್ರಜಾಸ್ತ್ರ ಸುದ್ದಿ

ಚನ್ನರಾಯಪಟ್ಟಣ: ಜನಸೇವೆಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಡಿ.ಕೆ ಶಿವಕುಮಾರ್ ಕೇಳುತ್ತಿಲ್ಲ. ಬೆಂಗಳೂರಲ್ಲಿ ಮಾಲ್ ಗಳನ್ನು ನಿರ್ಮಿಸಲು ಸಿಎಂ ಮಾಡಿ ಎಂದು ಕೇಳುತ್ತಿದ್ದಾರೆ ಅಂತಾ ಜೆಡಿಎಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಪಂಚರತ್ನ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ವಿಧಾನಸಭೆಯಲ್ಲಿ ಜನರ ಪರ ಧ್ವನಿ ಎತ್ತುವುದಿಲ್ಲ. ಈಗ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್ ನನ್ನ ಕೈಗೆ ಪೆನ್ನು ಕೊಡಿ ಎನ್ನುತ್ತಿರುವುದು ಬೆಂಗಳೂರಿನಲ್ಲಿ ಮಾಲ್, ಅಪಾರ್ಟ್ ಮೆಂಟ್ ಕಟ್ಟಿಸಲು ಎಂದು ಕಿಡಿ ಕಾರಿದರು.

ಇನ್ನು ಬಿಜೆಪಿ ಶಾಸಕರ ಮನೆಯಲ್ಲಿ 8 ಕೋಟಿ ರೂಪಾಯಿ ಇದೆ ಎನ್ನುವುದಾದರೆ, ರಾಜ್ಯದಲ್ಲಿ ಇರುವುದು ಲೂಟಿ ಸರ್ಕಾರ ಎಂದು ರಾಜ್ಯದ ಜನತೆಗೆ ತಿಳಿಯುತ್ತದೆ ಅಂತಾ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
Leave a Reply

Your email address will not be published. Required fields are marked *

error: Content is protected !!