‘ಆ’ ವಿಡಿಯೋ ಅಪ್ಲೋಡ್ ಹಿಂದೆ ಹನಿಟ್ರ್ಯಾಪ್ ಸುಂದರಿ

398

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಮೀನು ವ್ಯಾಪಾರಿಯೊಬ್ಬ, ಯುವತಿಯೊಂದಿಗೆ ಸರಸ ಸಲ್ಲಾಪವಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ಸಂಬಂಧ ಆತನನ್ನ ಬಂಧಿಸಲಾಗಿತ್ತು. ಆದ್ರೆ, ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಇದು ಬಂಧಿತ ವ್ಯಕ್ತಿ ಮಾಡಿದ್ದು ಅಲ್ವಂತೆ. ಈತನ ಜೊತೆಗಿದ್ದ ಸುಂದರಿಯೇ ಇದರ ಹಿಂದಿನ ಸೂತ್ರದಾರಿ ಎನ್ನಲಾಗ್ತಿದೆ.

ಬಂಟ್ವಾಳದ ಟಿಪ್ಪುನಗರದ 55 ವರ್ಷದ ಮೀನು ವ್ಯಾಪಾರಿಯನ್ನ ಬಲೆಗೆ ಬೀಳಿಸಿಕೊಂಡ ಯುವತಿ, ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾಳೆ. ಆತನ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ ವಿಡಿಯೋವನ್ನ ಮೊಬೈಲ್ ನಲ್ಲಿ ಚಿತ್ರಿಕರಿಸಿಕೊಂಡಿದ್ದಾಳೆ. ಇದಾದ ಕೆಲ ದಿನಗಳ ಬಳಿಕ ಮೀನು ವ್ಯಾಪಾರಿಗೆ ಫೋನ್ ಮೂಲಕ ಹಣದ ಬೇಡಿಕೆ ಬರಲು ಶುರುವಾಗಿದೆಯಂತೆ. ಒಂದು ದಿನ ಮೀನು ವ್ಯಾಪಾರಿಯನ್ನ ನಾಲ್ವರು ಅಪಹರಿಸಿ 60 ಸಾವಿರ ಹಣ ದೋಚಿದ್ದಾರೆ. ಅಲ್ದೇ, ಎಟಿಎಂ ಬಳಸಿ 9 ಸಾವಿರ ಹಾಗೂ ಅದೇ ದಿನ 48 ಸಾವಿರ ರೂಪಾಯಿಯನ್ನ ಪಡೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಯುವತಿಯನ್ನ ಕೇಳಿದ್ರೆ, ಮೊಬೈಲ್ ರಿಪೇರಿಗೆ ಕೊಟ್ಟಾಗ ವಿಡಿಯೋ ಬೇರೆಯವರಿಗೆ ಸಿಕ್ಕಿದೆ ಅಂತಾ ಹೇಳಿದ್ದಾಳೆ. ಆದ್ರೆ, ಇದೊಂದು ಹನಿಟ್ರ್ಯಾಪ್ ಅಂತಾ ಹೇಳಲಾಗ್ತಿದೆ. ಈ ಪ್ರಕರಣ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಜೂನ್ 27ರಂದು ದೂರು ದಾಖಲಾಗಿತ್ತು. ಇಬ್ಬರು ಹೆಂಡ್ತಿಯರು 9 ಮಕ್ಕಳಿರುವ ಈ ಮಹಾಶಯ ಮತ್ತೊಂದು ಹೆಣ್ಣಿನ ಮೋಹಕ್ಕೆ ಸಿಲುಕಿ ಹಣದ ಜೊತೆಗೆ ಮರ್ಯಾದೆಯನ್ನ ಸಹ ಕಳೆದುಕೊಂಡಿದ್ದಾನೆ.




Leave a Reply

Your email address will not be published. Required fields are marked *

error: Content is protected !!