ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ಮಸ್ಕ್ ಶೀಘ್ರ ರಾಜೀನಾಮೆ

175

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಟೆಸ್ಲಾ ಕಾರು ಕಂಪನಿಯ ಮೂಲಕ ಸಾಕಷ್ಟು ಸದ್ದು ಮಾಡಿದೆ ಎಲೋನ್ ಮಸ್ಕ್, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಉದ್ಯಮಿ. ಕಳೆದ ನವೆಂಬರ್ 17ರಂದು ಟ್ವಿಟ್ಟರ್ ನ್ನು 44 ಬಿಲಿಯನ್ ಡಾಲರ್ ಗೆ ಖರೀದಿಸಿದರು. ಹೊಸ ಹೊಸ ಬದಲಾವಣೆ ಮಾಡಿದರು.

ಭಾರತ ಮೂಲದ ಪರಾಗ್ ಅಗರ್ವಾಲ್ ಅವರನ್ನು ಸಿಇಒ ಸ್ಥಾನದಿಂದ ತೆಗೆದ ಮೇಲೆ ಆ ಸ್ಥಾನಕ್ಕೆ ಯಾರನ್ನು ನೇಮಿಸಿಲ್ಲ. ತಾವೇ ಮುಂದುವರೆಸಿಕೊಂಡು ಹೊರಟಿದ್ದರು. ಈಗ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಲು ಮಸ್ಕ್ ನಿರ್ಧರಿಸಿದ್ದಾರೆ. ಈ ಬಗ್ಗೆ ಡಿಸೆಂಬರ್ 19ರಂದು ಸರ್ವೇ ನಡೆಸಿದ್ದರು. ಅದರಲ್ಲಿ ಶೇಕಡ 57.5ರಷ್ಟು ಮತ ವಿರುದ್ಧ, ಶೇಕಡ 52.5ರಷ್ಟು ಮತ ಪರ ಬಿದ್ದಿವೆ.

ಎಂದಿನಂತೆ ತಮ್ಮ ವ್ಯಂಗಾತ್ಮಕ ಟ್ವೀಟ್ ಮಾಡಿದ್ದಾರೆ. ಕೆಲಸ ತೆಗೆದುಕೊಳ್ಳುವಷ್ಟು ಮೂರ್ಖರು ಸಿಕ್ಕರೆ ಆದಷ್ಟು ಬೇಗ ರಾಜೀನಾಮೆ ನೀಡುತ್ತೇನೆ. ಸಾಫ್ಟ್ ವೇರ್, ಸರ್ವರ್ಸ್ ಟೀಂ ನಡೆಸುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!