ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಅಂತಿಮ ಹಂತಕ್ಕೆ ಬಂದಿದೆ. ಭಾನುವಾರ ಗುಜರಾತಿನ ಅಹಮದಾಬಾದ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಫೈನಲ್ ಕದನ ನಡೆಯಲಿದೆ. ಇದಕ್ಕಾಗಿ ಕ್ರೀಡಾಲೋಕ, ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಫೈನಲ್ ಪಂದ್ಯಕ್ಕೂ ಮೊದಲು ಗಾಂಧಿನಗರದ ಹತ್ತಿರದ ಅಡಾಲಾಜ್ ಸ್ಟೆಪ್ ವೆಲ್ ಪ್ರವಾಸಿ ತಾಣದಲ್ಲಿ ಎರಡೂ ತಂಡಗಳ ನಾಯಕರ ಫೋಟೋ ಶೂಟ್ ನಡೆಸಲಾಗಿದೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ. ಇನ್ನು ಬಾಲಿವುಡ್ ಗಾಯಕರು ಜೀತೇಗ ಇಂಡಿಯಾ ಜೀತೇಗ ಎನ್ನುವ ಹಾಡು ರಚಿಸಿದ್ದಾರೆ. ಪಂದ್ಯ ಆರಂಭಕ್ಕೂ ಮೊದಲು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ಕುಣಿತ ಇರಲಿದೆ. ಜೊತೆಗೆ ವಾಯುಪಡೆಯ ಏರ್ ಶೋ ಸಹ ಇರಲಿದೆ.
ಇನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಈ ಹಿಂದಿನ ಟೀಂ ಇಂಡಿಯಾ ನಾಯಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ. 12 ವರ್ಷಗಳ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ಕಪ್ ಎತ್ತಿ ಹಿಡಿಯವ ಕ್ಷಣ ಸವಿಯಲು ಸಿನಿ ರಂಗದ ತಾರೆಯರು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. 1.30 ಲಕ್ಷ ಜನರು ಕ್ರೀಡಾಂಗಣದಲ್ಲಿ ಲೈವ್ ಪಂದ್ಯ ನೋಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಶುರುವಾಗಲಿದೆ.