ಎಂದೂ ಕರಗದ ಐಸ್ ಹೋಟೆಲ್

276

ಪ್ರಜಾಸ್ತ್ರ ಲೈಫ್ ಸ್ಟೈಲ್ ಮತ್ತು ಪ್ರವಾಸ

ಹಿಮದಲ್ಲಿ ಒಂದಿಷ್ಟು ಕಾಲ ಕಳೆಯೋದು ರೋಚಕ ಕ್ಷಣ. ಹೀಗಾಗಿ ಆಗಾಗಾ ಹಿಮಪ್ರದೇಶಗಳನ್ನ ಹುಡುಕಿಕೊಂಡು ಪ್ರವಾಸಕ್ಕೆ ಹೋಗ್ತಾರೆ. ಇನ್ನು ಕೆಲವು ಕಡೆ ಕೃತಕ ಹಿಮ ಪ್ರದೇಶ ನಿರ್ಮಾಣ ಮಾಡಿ ಜನರಿಗೆ ಮನರಂಜನೆ ನೀಡಲಾಗುತ್ತೆ. ಬೆಂಗಳೂರು ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಈ ರೀತಿ ಇವೆ.

ಇದೆ ರೀತಿ ಸ್ವೀಡನ್ ನಲ್ಲಿ ವಾರ್ಮ್ ಹೋಟೆಲ್ ಇದೆ. 1989ರಲ್ಲಿ ಶುರುವಾದ ದಿ ಐಸ್ ಹೋಟೆಲ್ ತುಂಬಾ ವಿಶಿಷ್ಟವಾಗಿದೆ. ಇಲ್ಲಿ ವರ್ಷದ 365 ದಿನವೂ ಸೇವೆ ಲಭ್ಯ. ಮಂಜಿನ ಹೋಟೆಲ್ ನಲ್ಲಿ ಉಳಿದುಕೊಳ್ಳಬಹುದು. ಆಟವಾಡಬಹುದು. ಸಭೆ ನಡೆಸಬಹುದು. ಪಾರ್ಟಿ ಮಾಡಬಹುದು. ಮದುವೆ ಸಮಾರಂಭ ಸಹ ಮಾಡಬಹುದು.

ಬಿಸಿಲಿಗೆ ಹಿಮ ಸಹಜವಾಗಿ ಕರಗುತ್ತೆ. ಆದ್ರೆ, ಇಲ್ಲಿ ಹಾಗಾಗಲ್ಲ. ಸೂರ್ಯನ ಕಿರಣಗಳಿಂದ ಇಲ್ಲಿನ ಮಂಜು ಕರಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಲ್ಲಿ ವರ್ಷಪೂರ್ತಿ ಹಿಮದ ಅನುಭವ ಪಡೆಯಬಹುದು. ಈ ಹೋಟೆಲ್ ಎಷ್ಟೊಂದು ವಿಶೇಷವಾಗಿದೆ ಅನ್ನೋದಕ್ಕೆ ಇಲ್ಲಿನ ಫೋಟೋಗಳೇ ಸಾಕ್ಷಿ.




Leave a Reply

Your email address will not be published. Required fields are marked *

error: Content is protected !!