ಆಲಿಯಾ, ಹೃತಿಕ್ ಗೆ IIFA 2023 ಪ್ರಶಸ್ತಿ ಗರಿ

107

ಪ್ರಜಾಸ್ತ್ರ ಸಿನಿಮಾ ಡೆಸ್ಕ್

IIFA 2023 ಪ್ರಶಸ್ತಿಯಲ್ಲಿ ನಟಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ನಟ ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಬುಧಾಬಿಯಲ್ಲಿ ಶನಿವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಗಂಗೂಬಾಯಿ ಕಾಥಿಯವಾಡಿ ಚಿತ್ರದ ನಟನೆಗಾಗಿ ನಟಿ ಆಲಿಯಾ ಭಟ್ ಅತ್ಯುತ್ತಮ ನಟಿ, ವಿಕ್ರಮ್ ವೇದಾ ಚಿತ್ರದ ಅಭಿನಯಕ್ಕಾಗಿ ನಟ ಹೃತಿಕ್ ರೋಷನ್ ಅತ್ಯುತ್ತಮ ನಟ ಪ್ರಶಸ್ತಿ, ಅರಿಜಿತ್ ಸಿಂಗ್ ಅತ್ಯುತ್ತಮ ಗಾಯಕ, ಶ್ರೇಯಾ ಘೋಷಾಲ್ ಅತ್ಯುತ್ತಮ ಗಾಯಕಿ, ರಾಕೆಟ್ರಿ ನಂಬಿ ಎಫೆಕ್ಟ್ ಚಿತ್ರಕ್ಕಾಗಿ ನಟ ಆರ್.ಮಾಧವನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ದೃಶ್ಯಂ-2 ಅತ್ಯುತ್ತಮ ಚಿತ್ರ, ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಕಮಲ್ ಹಾಸನ್ ಪ್ರಶಸ್ತಿ ಪಡೆದಿದ್ದಾರೆ. ಗಂಗೂಬಾಯಿ ಕಾಥಿಯವಾಡಿ, ವಿಕ್ರಮ್ ವೇದಾ ಚಿತ್ರ ಅತಿ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ.




Leave a Reply

Your email address will not be published. Required fields are marked *

error: Content is protected !!