ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ: ಮಾಧ್ಯಮಗಳಿಗೆ ಸಂಸದೆ ಸವಾಲು

264

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಸಧ್ಯ ಭರ್ಜರಿಯಾಗಿ ಸುದ್ದಿಯಾಗ್ತಿರುವುದು ಸಂಸದೆ ಸುಮಲತಾ ಅಂಬರೀಶ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸ್ತಿರುವ ಹೋರಾಟ. ಮಂಡ್ಯದಲ್ಲಿ ಬೇಬಿ ಬೆಟ್ಟ ಸೇರಿ ಹಲವು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೋಮವಾರವಷ್ಟೇ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿಯವರನ್ನ ಭೇಟಿಯಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳು ಸಂಸದೆ ಸುಮಲತಾ ಅವರನ್ನ ಕೇಳಿದಾಗ, ನಾನು ಏನು ಹೇಳಿದೆ, ಅವರು ಏನು ಹೇಳಿದರು, ವಿಪಕ್ಷದವರು ಏನು ಹೇಳಿದರು ಅನ್ನೋದನ್ನ ಕೇಳುವ ಬದಲು, ಮಾಧ್ಯಮಕ್ಕೆ ಸವಾಲು ಹಾಕುತ್ತೇನೆ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ಯಾ ಇಲ್ವಾ ನೀವು ಹೋಗಿ ನೋಡಿ. ಇದರ ಬಗ್ಗೆ ರಹಸ್ಯ ಕಾರ್ಯಾಚರಣೆ ಮಾಡಿ. ಆಗ ಸತ್ಯ ಗೊತ್ತಾಗುತ್ತೆ. ಮಾಧ್ಯಮದವರು ಸಹ ಅದನ್ನ ಮಾಡಬಹುದಲ್ವಾ ಎಂದು ಪ್ರಶ್ನಿಸುವ ಮೂಲಕ, ಬರೀ ಅವರಿವರ ಪ್ರತಿಕ್ರಿಯೆ ಕೇಳುವುದು ಮಾಧ್ಯಮದ ಕೆಲಸ ಅಲ್ಲವೆಂದು ಪರೋಕ್ಷವಾಗಿ ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಓರ್ವ ಸಂಸದೆ ಅಕ್ರಮ ಗಣಿಗಾರಿಕೆ ಬಗ್ಗೆ ಇಷ್ಟೊಂದು ಗಂಭೀರವಾದ ಆರೋಪ ಮಾಡ್ತಿದ್ರೂ, ಜಿಲ್ಲಾ ಉಸ್ತುವಾರಿ ಸಚಿವರಾಗ್ಲಿ, ಅದಕ್ಕೆ ಸಂಬಂಧಿಸಿದ ಸಚಿವರಾಗ್ಲಿ, ಮುಖ್ಯಮಂತ್ರಿಗಳಾಗ್ಲಿ ಒಂದೇ ಒಂದು ಮಾತು ಆಡುತ್ತಿಲ್ಲ. ಹೀಗಾಗಿ ಸಹಜವಾಗಿ ರಾಜ್ಯದ ಜನತೆಗೆ ಅಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಸತ್ಯ ಇರಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಅಕ್ರಮ ಗಣಿಗಾರಿಕೆ ಬರೀ ರಾಜಕೀಯ ಗುದ್ದಾಟಕ್ಕೆ ಸಿಮೀತವಾಗದೆ, ಒಂದೊಳ್ಳೆ ಹೋರಾಟವಾದ್ರೆ ಮುಂದಿನ ಪೀಳಿಗೆಗೆ ಖಂಡಿತ ಒಳ್ಳೆಯದು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!