ಭಾರತ-ಆಸೀಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?

208

ಪ್ರಜಾಸ್ತ್ರ ಸುದ್ದಿ

ಮುಂಬೈ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಟೆಸ್ಟ್ ಸರಣಿ ಗೆದ್ದ ಬಳಿಕ ಏಕದಿನ ಸರಣಿ ನಡೆಯುತ್ತಿದೆ. ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.

ಆದರೆ, ಇದೀಗ ಮಳೆಯ ಆತಂಕ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ. ಕಳೆದ ಎರಡ್ಮೂರು ದಿನಗಳಿಂದ ಮಳೆ ಕಾಣಿಸಿಕೊಳ್ಳುತ್ತಿದೆ. ಇಂದು ಸಹ ಶೇಕಡ 5ರಷ್ಟು ಮೋಡ ಕವಿದ ವಾತಾವರಣವಿದೆ. ಪಂದ್ಯದ ಸಮಯಕ್ಕೆ 33 ಡಿಗ್ರಿ ಸೆಲ್ಸಿಯಸ್ ಗೆ ಇಳಿಯಲಿದೆಯಂತೆ. ಇನ್ನು ಮೊದಲ ಪಂದ್ಯವನ್ನು ಹಾರ್ದಿಕ್ ಪಾಂಡ್ಯೆ ಮುನ್ನಡೆಸಲಿದ್ದಾರೆ.

ಟೆಸ್ಟ್ ನಲ್ಲಿ ಮಿಂಚಿದ ಆಟಗಾರರು ಏಕದಿನ ಸರಣಿಯಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಮತ್ತೆ ಹೊಸ ಹೊಸ ದಾಖಲೆಗಳನ್ನು ಬರೆಯುವ ತವಕದಲ್ಲಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳು ಶತಕದ ನಿರೀಕ್ಷೆಯಲ್ಲಿದ್ದಾರೆ. ಇನ್ನು ರವೀಂದ್ರ ಜಡೇಜಾ ಬಹಳ ದಿನಗಳ ನಂತರ ಏಕದಿನ ಟೂರ್ನಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಶುರುವಾಗಲಿದೆ. ಒಟ್ಟು 3 ಏಕದಿನ ಪಂದ್ಯಗಳು ನಡೆಯಲಿವೆ.
Leave a Reply

Your email address will not be published. Required fields are marked *

error: Content is protected !!