480 ರನ್ ಗಳಿಗೆ ಆಸೀಸ್ ಆಲೌಟ್

177

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಇಲ್ಲಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೋಫಿಯ 4ನೇ ಟೆಸ್ಟ್ ಪಂದ್ಯದ 2 ದಿನದಾಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 10 ಓವರ್ ಗಳಲ್ಲಿ 36 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 17, ಶುಭನಂ ಗಿಲ್ 18 ರನ್ ಗಳೊಂದಿಗೆ ಆಡುತ್ತಿದ್ದಾರೆ.

ಮೊದಲ ಇನ್ನಿಂಗ್ ನ್ನು ಆಸ್ಟ್ರೇಲಿಯಾ 480 ರನ್ ಗಳಿಗೆ ಮುಕ್ತಾಯಗೊಳಿಸಿದೆ. ಉಸ್ಮಾನ್ ಕ್ವಾಜಾ ಭರ್ಜರಿ 180, ಕೆರ್ಮಾನ್ ಗ್ರೀನ್ 114 ರನ್ ಗಳ ಆಟದಿಂದಾಗಿ ದೊಡ್ಡ ಸ್ಕೋರ್ ನೀಡಲು ಸಾಧ್ಯವಾಯಿತು. ಮುರ್ಫಿ 41, ನಾಯಕ ಸ್ಮಿತ್ 38, ಲೇಯಾನ್ 34, ಹೆಡ್ 32 ರನ್ ಗಳಿಸಿದರು.

ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಪಡೆದು ಮಿಂಚಿದರು. ಶಮಿ 2 ವಿಕೆಟ್ ಪಡೆದು ಸಾಥ್ ನೀಡಿದರು. ಜಡೇಜಾ ಹಾಗೂ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!