2-1 ಅಂತರದಿಂದ ಸರಣಿ ಗೆದ್ದ ಇಂಡಿಯಾ

209

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಟೋಫಿಯ 4ನೇ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 480 ರನ್ ಗಳನ್ನು ಚೇಸ್ ಮಾಡಿದ ಭಾರತ 571 ರನ್ ಗಳಿಗೆ ಆಲೌಟ್ ಆಯಿತು. ಅಲ್ಲಿಗೆ 91 ರನ್ ಗಳ ಲೀಡ್ ನೀಡಿತು.

2ನೇ ಇನ್ನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತು. ಹೀಗಾಗಿ 5ನೇ ದಿನ ಯಾವುದೇ ಮ್ಯಾಜಿಕ್ ನಡೆಯದೆ ಎಲ್ಲರೂ ಅಂದುಕೊಂಡಂತೆ ಪಂದ್ಯ ಡ್ರಾ ಕಂಡಿತು. ಹೆಡ್ 90 ರನ್, ಮೊರ್ನಸ್ ಅಜೇಯ 63 ರನ್ ಗಳಿಸಿದರು.

ಇಂಡಿಯಾ ಪರ ಅಕ್ಷರ್ ಪಟೇಲ್, ಅಶ್ವಿನ್ ತಲಾ 1 ವಿಕೆಟ್ ಪಡೆದರು. ಇದರೊಂದಿಗೆ ಭಾರತ 2-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.




Leave a Reply

Your email address will not be published. Required fields are marked *

error: Content is protected !!